ನೀರಿನ ಗುಣಮಟ್ಟ ನಿರ್ವಹಣೆ ವ್ಯವಸ್ಥೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅತಿದೊಡ್ಡ ಅಂಗವಾಗಿದೆ. ಅದರ ಮಾರ್ಗಸೂಚಿ ಪ್ರಕಾರ, ಕೆರೆಗಳಿಂದ ನೀರಿನ ಮಾದರಿಯನ್ನು ತೆಗೆದುಕೊಂಡು ಕಾಲಿಫಾರ್ಮ್ಸ್, ಪಿಎಚ್, ಬಯೋಕೆಮಿಕಲ್ ಆಕ್ಸಿಜನ್ ಮತ್ತು ಇತರ ರಾಸಾಯನಿಕಗಳನ್ನು ಬಳಸಿ ಪರೀಕ್ಷೆ ನಡೆಸಲಾಗುತ್ತದೆ. ಇವುಗಳ ಆಧಾರದಲ್ಲಿ ಎ,ಬಿ,ಸಿ,ಡಿ ಮತ್ತು ಇ ಶ್ರೇಣಿಯನ್ನು ನೀಡಲಾಗುತ್ತಿದ್ದು ಎ ವಿಭಾಗದ ಸರೋವರ/ಟ್ಯಾಂಕ್ ಗಳ ನೀರು ಉತ್ತಮ ಮತ್ತು ಕುಡಿಯಲು ಯೋಗ್ಯವೆಂದೂ ಇ ವಿಭಾಗದ ನೀರು ಅತ್ಯಂತ ಮಾಲಿನ್ಯವಾಗಿದ್ದು ಕುಡಿಯಲು ಮತ್ತು ಇನ್ನಿತರ ನಿತ್ಯ ಬಳಕೆಗೆ ಕೂಡ ಯೋಗ್ಯವಲ್ಲ ಎಂದು ವರ್ಗೀಕರಿಸಲಾಗುತ್ತದೆ ಎಂದು ಕೆಎಸ್ ಪಿಸಿಬಿ ಅಧಿಕಾರಿಗಳು ಹೇಳುತ್ತಾರೆ.