ಬಸವಕಲ್ಯಾಣ: ಬೀದರ್ ಜಿಲ್ಲೆಯ ಬಸವಕಲ್ಯಾಣ ಬಳಿ ಶನಿವಾರ ಬೆಳಗಿನ ಜಾವ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಮತ್ತು ಓರ್ವ ಮಗು ಗಂಭೀರವಾಗಿ ಗಾಯಗೊಂಡಿದೆ.
ಇಂದು ಬೆಳಗ್ಗೆ 3 ಗಂಟೆಯ ಸುಮಾರಿಗೆ ಬಸವಕಲ್ಯಾಣದ ಸಾತಪುರ್ ಬಂಗಲೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಮೃತಪಟ್ಟಿದ್ದು, ಮಯೂರ್ ಚವ್ಲಾ, ಜೆನಲ್ ಚಾವ್ಲಾ, ಭಾರತಿ ಚಾವ್ಲಾ, ಖಯಾಮ್ ಚಾವ್ಲಾ ಮತ್ತು ಒಂಬತ್ತು ವರ್ಷದ ಬಾಲಕ ಸುನೀಲ್ ಚಾವ್ಲಾ ಮೃತ ದುರ್ದೈವಿಗಳಾಗಿದ್ದಾರೆ.
ಎರಡು ವರ್ಷದ ಮಗು ತ್ರಿಶಾ ಗಂಭೀರವಾಗಿ ಗಾಯಗೊಂಡಿದ್ದು, ಆ ಮಗುವನ್ನು ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರೆಲ್ಲರೂ ನವಿ ಮುಂಬೈ ನಿವಾಸಿಗಳಾಗಿದ್ದಾರೆ.