ಪ್ರತಿಷ್ಠಿತ 'ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ' ಕಾರ್ಯಕ್ರಮಕ್ಕೆ ರಾಜ್ಯದಿಂದ ತೇಜಸ್ವಿ ಸೂರ್ಯ ಆಯ್ಕೆ

ಬ್ರಿಟಿಷ್ ಸರ್ಕಾರದ ಬ್ರಿಟಿಷ್ ಹೈ ಕಮೀಷನ್ನವರು 2 ವರ್ಷಕ್ಕೊಮ್ಮೆ ನಡೆಸುವ ಪ್ರತಿಷ್ಠಿತ ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ ಕಾರ್ಯಕ್ರಮಕ್ಕೆ ಭಾರತದಿಂದ 12 ಜನ ಯುವ ರಾಜಕಾರಣಿಗಳು...
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
Updated on: 
ಬೆಂಗಳೂರು: ಬ್ರಿಟಿಷ್ ಸರ್ಕಾರದ ಬ್ರಿಟಿಷ್ ಹೈ ಕಮೀಷನ್ 2 ವರ್ಷಕ್ಕೊಮ್ಮೆ ನಡೆಸುವ ಪ್ರತಿಷ್ಠಿತ ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ ಕಾರ್ಯಕ್ರಮಕ್ಕೆ ಭಾರತದಿಂದ 12 ಜನ ಯುವ ರಾಜಕಾರಣಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳಿಂದ ಮತ್ತು ಬೇರೆ ಬೇರೆ ರಾಜಕೀಯ ಪಕ್ಷಗಳ ಯುವ ಮುಖಂಡರುಗಳನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರಾಗಿರುವ ತೇಜಸ್ವಿ ಸೂರ್ಯ (26)ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ. 
ಉತ್ತಮ ಶಿಕ್ಷಣ ಪಡೆದಿರುವ, ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುತ್ತಿರುವ, ವೈಚಾರಿಕ ನೆಲೆಗಟ್ಟಿನ ಅಡಿಯಲ್ಲಿ ಉತ್ತಮ ಬೌಧ್ಧಿಕ ಮಟ್ಟವನ್ನು ಹೊಂದಿರುವವರನ್ನು, ಭಾಷಣ ಹಾಗೂ ಟಿ.ವಿ ಡಿಬೇಟ್‌ಗಳ ಮೂಲಕ ಸಮಾಜದ ಮೇಲೆ ಪರಿಣಾಮ ಬೀರುತ್ತಿರುವ ಯುವ ರಾಜಕಾರಣಿಗಳನ್ನು ನೇರವಾಗಿ ಬ್ರಿಟಿಷ್ ಹೈ ಕಮಿಷನ್ ಈ ಕಾರ್ಯಕ್ರಮಕ್ಕೆ ಆಯ್ಕೆಮಾಡುತ್ತದೆ. ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ  12 ಜನ ಯುವ ರಾಜಕಾರಣಿಗಳ ಪೈಕಿ ತೇಜಸ್ವಿ ಸೂರ್ಯ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. 
ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ತಂಡದಲ್ಲಿ ಸಮಾಜವಾದಿ ಪಕ್ಷದಿಂದ ಮಾಜಿ ಸಚಿವ ಪ್ರೊ. ಅಭಿಷೇಕ್ ಮಿಶ್ರಾ (ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದವರು), ಕಾಂಗ್ರೆಸ್ ಪಕ್ಷದಿಂದ ಮಧ್ಯಪ್ರದೇಶದ ಶಾಸಕ ಜಯವರ್ಧನ್ ಸಿಂಗ್, ಪಂಜಾಬ್ ಶಾಸಕ ಅಂಗದ್ ಸಿಂಗ್, ಕೇರಳದ ಕಮ್ಯುನಿಸ್ಟ್ ಪಕ್ಷದ ಶಾಸಕ ಮಹಮದ್ ಮಹಸಿನ್, ಆಮ್ ಆದ್ಮಿ ಪಕ್ಷದಿಂದ ದೆಹಲಿ ಶಾಸಕ ಸೌರಭ್ ಭಾರಧ್ವಾಜ್, ಮುಂಬೈ ಬಿಜೆಪಿ ಅಧ್ಯಕ್ಷ, ಶಾಸಕ ಆಶಿಷ್ ಶೇಲಾರ್, ಜಮ್ಮು ಕಾಶ್ಮೀರದ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಡಾ.ಹೀನಾ ಭಟ್ ಈ ತಂಡದಲ್ಲಿದ್ದಾರೆ. ವಿಶೇಷವೆಂದರೆ ಆಯ್ಕೆಯಾಗಿರುವ 12 ಜನರ ಪೈಕಿ  ಶಾಸಕರು ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರೇ ಈ ತಂಡದಲ್ಲಿದ್ದು, ಶಾಸಕರಾಗದೇ ಅಥವಾ ಯಾವುದೇ ಸಾಂವಿಧಾನಿಕ ಹುದ್ದೆಗಳನ್ನು ಹೊಂದದೇ ತೇಜಸ್ವಿ ಸೂರ್ಯ ಹಾಗೂ ಡಾ.ಹೀನಾ ಭಟ್ ಆಯ್ಕೆಯಾಗಿದ್ದಾರೆ.   
ರಾಜ್ಯದ ಪತ್ರಿಕೆಗಳಲ್ಲಿ ಅಂಕಣಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ತೇಜಸ್ವಿ ಸೂರ್ಯ ಪರಿಚಿತರಾಗಿದ್ದಾರೆ. ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ ಕಾರ್ಯಕ್ರಮದ ಪ್ರವಾಸ ಮೇ.15 ರಿಂದ 26 ರ ವರೆಗೆ ನಡೆಯಲಿದ್ದು, ಭಾರತೀಯ ತಂಡ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಮಂತ್ರಿಗಳು ಮತ್ತು ಸಂಸದರನ್ನು ಭೇಟಿ ಮಾಡಿ ಸಂವಾದ ನಡೆಸಲಿದೆ. ವಿಶೇಷವಾಗಿ ಸ್ಕಾಟ್ಲೆಂಡ್ ಪಾರ್ಲಿಮೆಂಟ್‌ಗೆ ಭೇಟಿ ಮತ್ತು ಅಲ್ಲಿನ ಸಂಸದರೊಂದಿಗೆ ಚರ್ಚೆ, ಲಂಡನ್ ಮೇಯರ್‌ರೊಂದಿಗೆ ಸ್ಮಾರ್ಟ ಸಿಟಿಗಳ ಬಗ್ಗೆ ಚರ್ಚೆ, ಯು.ಕೆ ಯ ವಾಣಿಜ್ಯ ಮಂಡಳಿಗೆ ಭೇಟಿ & ಸಂವಾದ ಹಾಗೂ ಆಕ್ಸಫರ್ಡ್ ಮತ್ತು ಲಂಡನ್‌ವಿಶ್ವವಿದ್ಯಾಲಯಗಳಿಗೆ ಭೇಟಿ ಮತ್ತು ಅಲ್ಲಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರೊಂದಿಗೆ ಸಂವಾದ ಈ ಪ್ರವಾಸದ ಪ್ರಮುಖ ಅಂಶಗಳಾಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com