ದೇವಾಲಯಕ್ಕೆ ದಲಿತರ ಪ್ರವೇಶ: ತುಮಕೂರಿನಲ್ಲಿ ಅರ್ಧಕ್ಕೆ ರದ್ದಾದ ಗ್ರಾಮದೇವತೆ ಹಬ್ಬ

ದೇವಾಲಯಕ್ಕೆ ದಲಿತರು ಪ್ರವೇಶಿಸಿದರು ಎಂಬ ಕಾರಣಕ್ಕೆ ಆರಂಭವಾಗಿದ್ದ ಗ್ರಾಮದೇವತೆ ಹಬ್ಬವನ್ನು ಅರ್ಧಕ್ಕೆ ರದ್ಧುಗೊಳಿಸಿರುವ ಘಟನೆ ತುಮಕೂರಿನ...
ಆಹಾರ ಸೇವಿಸಲು ನಿರಾಕರಿಸುತ್ತಿರುವ ದೇವಾಲಯದ ಗೂಳಿ
ಆಹಾರ ಸೇವಿಸಲು ನಿರಾಕರಿಸುತ್ತಿರುವ ದೇವಾಲಯದ ಗೂಳಿ
Updated on: 
ತುಮಕೂರು: ದೇವಾಲಯಕ್ಕೆ ದಲಿತರು ಪ್ರವೇಶಿಸಿದರು ಎಂಬ ಕಾರಣಕ್ಕೆ ಆರಂಭವಾಗಿದ್ದ ಗ್ರಾಮದೇವತೆ ಹಬ್ಬವನ್ನು ಅರ್ಧಕ್ಕೆ ರದ್ಧುಗೊಳಿಸಿರುವ ಘಟನೆ ತುಮಕೂರಿನ ಕೊತ್ತಿಹಳ್ಳಿಯಲ್ಲಿ ನಡೆದಿದೆ.
ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ದೇವಾಲಯದಲ್ಲಿನ ಗೂಳಿ ಇದ್ದಕ್ಕಿದಂತೆ ನಿಷ್ಕ್ರಿಯವಾಗಿ ಆಹಾರ ಸೇವಿಸುವುದನ್ನು ನಿಲ್ಲಿಸಿದೆ ಎಂದು ಹೇಳಲಾಗಿದೆ.
ನಗರದಲ್ಲಿ ಮೇ 19 ರಿಂದ ಹುಚ್ಚಂಗಿಯಮ್ಮನ ಜಾತ್ರೆ ಆರಂಭವಾಗಿದೆ. ಈ ವೇಳೆ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ದೇವಾಲಯಕ್ಕೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆಗಾಗಿ ಪಟಾಕಿ ಸಿಡಿಸಿದ ಕಾರಣ ದೇವಾಲಯದ ಗೂಳಿ ಶಬ್ದಕ್ಕೆ ಹೆದರಿ  ಓಡಿ ಹೋಯಿತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. 
ಮೇ20 ರಂದು ಬೆಳಗ್ಗೆ ಸುಮಾರು 40 ದಲಿತ ಕುಟುಂಬಗಳು ಆರತಿಯೊಂದಿಗೆ ದೇವಾಲಯಕ್ಕೆ ಪ್ರವೇಶಿಸಿದ್ದಾರೆ. ಆ ಕೂಡಲೇ ದೇವಾಲಯ ಪ್ರಾಧಿಕಾರ ಹಬ್ಬವನ್ನು ರದ್ಧುಗೊಳಿಸಿದೆ.
ಕಳೆದ ವರ್ಷ ಜಾತ್ರೆಯ ಸಂದರ್ಭದಲ್ಲಿ ಹಬ್ಬದ ಖರ್ಚಿಗಾಗಿ ಹಣ ನೀಡಿದರೇ ದಲಿತ ಕಾಲೋನಿಯಲ್ಲಿ ದೇವಾಲಯದ ಮೆರವಣಿಗೆ ನಡೆಸುವುದಾಗಿ ದೇವಾಲಯ ಆಡಳಿತ ಮಂಡಳಿ ಭರವಸೆ ನೀಡಿತ್ತು. ಹೀಗಾಗಿ ನಾವು 12 ಸಾವಿರ ಹಣ ಸಂಗ್ರಹಿಸಿದ್ದು ಕೊಡುವುದು ತಡವಾಗಿದೆ. ಕೊಟ್ಟ ಮಾತಿನಂತೆ ದಲಿತ ಕೇರಿಗಳಲ್ಲಿ ದೇವರ ಮೆರವಣಿಗೆ ಮಾಡಬೇಕೆಂಬ ಕಾರಣದಿಂದಾಗಿ ಹಬ್ಬವನ್ನು ರದ್ಧುಗೊಳಿಸಲಾಗಿದೆ ಎಂದು ದಲಿತ ಸಮುದಾಯದ ಶಿವಣ್ಣ ಎಂಬಾತ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com