ಬೆಂಗಳೂರಿನಲ್ಲಿ ಬೀಫ್ ಫೆಸ್ಟ್'ಗೆ ಯೋಜನೆ: ಅನುಮತಿಗೆ ಪೊಲೀಸರ ನಕಾರ

ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಪ್ರಾಣಿಗಳ ಮಾರಾಟ ನಿಷೇಧಿಸಿರುವ ಕೇಂದ್ರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೇರಳದಲ್ಲಿ ನಡೆಸಲಾದ ಬೀಫ್ ಫೆಸ್ಟ್ ನಗರಕ್ಕೂ ಕಾಲಿಡಲಿದೆ...
ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ (ಸಂಗ್ರಹ ಚಿತ್ರ)
ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ (ಸಂಗ್ರಹ ಚಿತ್ರ)
ಬೆಂಗಳೂರು: ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಪ್ರಾಣಿಗಳ ಮಾರಾಟ ನಿಷೇಧಿಸಿರುವ ಕೇಂದ್ರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೇರಳದಲ್ಲಿ ನಡೆಸಲಾದ ಬೀಫ್ ಫೆಸ್ಟ್ ನಗರಕ್ಕೂ ಕಾಲಿಡಲಿದೆ ಎಂಬ ಸುದ್ದಿಗಳು ಕೇಳಿ ಬರತೊಡಗಿವೆ. 
ನಗರದ ಟೌನ್ ಹಾಲ್ ಬಳಿ ಮೂಮೆಂಟ್ ಬೆಂಗಳೂರು ಎಂಬ ಹೆಸರಿನಲ್ಲಿ ಬೀಫ್ ಫೆಸ್ಟ್ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಸಾರ್ವಜನಿಕವಾಗಿಯೇ ಗೋಮಾಂಸ ಸೇವನೆ ಮಾಡಲು ಕೆಲ ಸಂಘಟನೆಗಳು ನಿರ್ಧರಿಸಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. 
ಬೀಫ್ ಫೆಸ್ಟ್ ಸುದ್ದಿಗಳಿಗೆ ಭಾರತೀಯ ಗೋ ಪರಿವಾರಗಳು ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಗೋ ಪೂಜೆ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿಕೊಂಡಿದೆ. 
ಬೀಫ್ ಫೆಸ್ಟ್ ಕುರಿತಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿರುವ ನಗರ ಪೊಲೀಸರು, ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆ ಅಥವಾ ಬೀಫ್ ಫೆಸ್ಟ್ ಗೆ ಅನುಮತಿ ನೀಡಿಲಾಗಿಲ್ಲ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com