ಬೆಂಗಳೂರಲ್ಲಿ ಮತ್ತೆ ಶುರುವಾಯ್ತು ಸರಗಳ್ಳರ ಕೈಚಳಕ!

ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಸರಗಳ್ಳರು ಮತ್ತೆ ತಮ್ಮ ಕಸುಬು ಆರಂಭಿಸಿದ್ದಾರೆ. ಬೆಂಗಳೂರು ನಗರದಲ್ಲಿ ಈ ವರ್ಷ ಇಂದಿನ ದಿನಾಂಕದವರೆಗೆ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಸರಗಳ್ಳರು ಮತ್ತೆ ತಮ್ಮ ಕಸುಬು ಆರಂಭಿಸಿದ್ದಾರೆ.  ಬೆಂಗಳೂರು ನಗರದಲ್ಲಿ ಈ ವರ್ಷ ಇಂದಿನ ದಿನಾಂಕದವರೆಗೆ  326 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.
ಬಂಧಿಸಿದ್ದ ಇರಾನಿ ಮತ್ತು ಬವಾರಿಯಾ ತಂಡದ ಸದಸ್ಯರು ಜಾಮೀನಿನ ಮೇಲೆ ಹೊರಬಂದು ತಮ್ಮ ಕೈಚಳಕ ತೋರುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ವರ್ಷ ಕಡಿಮೆ ಸರಗಳ್ಳತನ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಮ್ ರೆಕಾರ್ಡ್ ಬ್ಯೂರೋ ಅಂಕಿ ಅಂಶಗಳ ಪ್ರಕಾರ, ನವೆಂಬರ್ ತಿಂಗಳ ಮೊದಲ ಆರು ದಿನಗಳಲ್ಲಿ, 13 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ, ಈ ವರ್ಷ ಒಟ್ಟು 326 ಪ್ರಕರಣಗಳಲ್ಲಿ 114 ಕೇಸ್ ಗಳಲ್ಲಿ ಇನ್ನೂ ಆರೋಪಿಗಳನ್ನು ಸೆರೆ ಹಿಡಿಯಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇರಾನಿ ಗ್ಯಾಂಗ್, ಬವಾರಿಯಾ ಗ್ಯಾಂಗ್ ಮತ್ತು ಕುಪ್ಪಂ ತಂಡಗಳು ಸಾಮಾನ್ಯವಾಗಿ ಬೈಕ್ ಕಳ್ಳತನ, ದರೋಡೆ ಮತ್ತು ಮಹಿಳೆಯರ ಸರ ಗಳ್ಳತನ ಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡು ಕದ್ದ ವಸ್ತುಗಳೊಂದಿಗೆ ನಗರ ತೊರೆಯುತ್ತಾರೆ ಎಂದು ಪೊಲೀಸ ಮೂಲಗಳು ತಿಳಿಸಿವೆ,
ಈ ತಂಡಗಳು ಹೊರ ವರ್ತುಲ ರಸ್ತೆ, ನೈಸ್ ರಸ್ತೆ ಗಳನ್ನು ಟಾರ್ಗೆಟ್ ಮಾಡುತ್ತವೆ. ಕೃತ್ಯ ನಡೆಸಿ  ಎಷ್ಟು ಸಾಧ್ಯವೊ ಅಷ್ಟು ಬೇಗ ಸ್ಥಳದಿಂದ ಪರಾರಿಯಾಗಿ ಬಿಡುತ್ತಾರೆ.ಉತ್ತರ, ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇವರ ಪ್ರಮುಖ ಗುರಿ ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಬರುವ ಹಿರಿಯ ಮಹಿಳೆಯರಾಗಿದ್ದಾರೆ, ರಾಷ್ಟ್ರಾದ್ಯಂತ ಇರಾನಿ ಗ್ಯಾಂಗ್ ಮತ್ತು ಬವಾರಿಯಾ ಗ್ಯಾಂಗ್ ವ್ಯಾಪಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಂಥ ಕೃತ್ಯವನ್ನು ನಡೆಸಲು ಅವರು ಕೆಲವರನ್ನು ನೇಮಿಸುತ್ತಾರೆ. ಕೆಲಸ ಮುಗಿದ ನಂತರ ಅವರಿಗೆ ಅದರಲ್ಲಿ ಪಾಲು ನೀಡಲಾಗುತ್ತದೆ. ಒಂದು ವೇಳೆ ಅವರ ಬಂಧನವಾದರೇ ಅವರನ್ನು ಜಾಮೀನಿನ ಮೇಲೆ ಬಿಡಿಸಲು ವಕೀಲರನ್ನು ನೇಮಿಸಲಾಗುತ್ತದೆ.
ಸರಗಳ್ಳತನ ಪ್ರಕರಣಗಳಲ್ಲಿ ಯಾರು ಭಾಗಿಯಾಗಿದ್ದಾರೆಂದು ಪತ್ತೆ ಹಚ್ಚಲಾಗುವುದು, ಚೆಕ್ ಪೋಸ್ಟ್ ಗಳಲ್ಲಿ ಸಿಟಿಯಿಂದ ಹೋಗುವ ಹಾಗೂ ಬರುವ ವಾಹನಗಳ ಮೇಲೆ ನಿಗಾ ಇಡಲು ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಬೆಳಗ್ಗಿನ ವೇಳೆ ಗಸ್ತು ತಿರುಗಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಇರಾನಿ ಗ್ಯಾಂಗ್ ಸದಸ್ಯರು ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಮತ್ತು ಮಧ್ಯ ಪ್ರದೇಶದವರಾಗಿದ್ದಾರೆ. ಇನ್ನೂ ಉತ್ತರ ಪ್ರದೇಶದ ಬವಾರಿಯಾ ಸಮುದಾಯದ ತಂಡ ಕೂಡ ಹಲವು ಸರಗಳ್ಳತನ ಪ್ರಕರಣಗಳಲ್ಲಿ  ಭಾಗಿಯಾಗಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com