ಬೆಂಗಳೂರು: ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)2018ರ ವೇಳಾಪಟ್ಟಿ ಪ್ರಕಟಗೊಂಡಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 15 ದಿನಗಳು ಮುಂಚೆಯೇ ಪರೀಕ್ಷೆಗಳು ನಡೆಯಲಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಮಾಹಿತಿ ಪ್ರಕಾರ, ಸಿಇಟಿ ಪರೀಕ್ಷೆಗಳು ಏಪ್ರಿಲ್ 18ರಿಂದ 20ರವರೆಗೆ ಮೂರು ದಿನಗಳು ನಡೆಯಲಿವೆ. ಸಿಇಟಿ ಪರೀಕ್ಷೆ ಸಾಮಾನ್ಯವಾಗಿ ಮೇ ತಿಂಗಳ ಮೊದಲ ವಾರ ನಡೆಯುತ್ತದೆ.
ಸಿಇಟಿ ವೇಳಾಪಟ್ಟಿಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹೊರತುಪಡಿಸಿ ಬೇರೆಲ್ಲಾ ವೃತ್ತಿಪರ ಪದವಿ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೇಳಾಪಟ್ಟಿ ಪ್ರಕಾರ, ಏಪ್ರಿಲ್ 18ರಂದು ಬೆಳಗ್ಗೆ ಜೀವಶಾಸ್ತ್ರ, ಅಪರಾಹ್ನ ಗಣಿತ, ಏಪ್ರಿಲ್ 19ರಂದು ಭೌತಶಾಸ್ತ್ರ ಮತ್ತು ಅಪರಾಹ್ನ ರಸಾಯನಶಾಸ್ತ್ರ, ಏಪ್ರಿಲ್ 20ರಂದು ಬೆಳಗ್ಗೆ ಕನ್ನಡ ಭಾಷೆ ಪರೀಕ್ಷೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಡೆಯಲಿದೆ.