ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಯಾರ ಸಾವಿಗೂ ನಾವು ಜವಾಬ್ದಾರರಲ್ಲ, ವೈದ್ಯರು

ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ವೈದ್ಯಕೀಯ ಸಂಘ ನಡೆಸಿದ್ದ ಪ್ರತಿಭಟನೆಯಿಂದಾಗಿ ರಾಜ್ಯದಲ್ಲಿ ಹಲವರು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿಗೀಡಾದವರಿಗೆ ನಾವು ಜವಾಬ್ದಾರರಲ್ಲ ನಾವು ಯಾರಿಗೂ ತೊಂದರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ವೈದ್ಯಕೀಯ ಸಂಘ ನಡೆಸಿದ್ದ ಪ್ರತಿಭಟನೆಯಿಂದಾಗಿ ರಾಜ್ಯದಲ್ಲಿ ಹಲವರು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿಗೀಡಾದವರಿಗೆ ನಾವು ಜವಾಬ್ದಾರರಲ್ಲ ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ವೈದ್ಯರು ಗುರುವಾರ ಹೇಳಿದ್ದಾರೆ. 
ಡಾ. ಸಿ ಜಯಣ್ಣ ಅವರು ಮಾತನಾಡಿ, ವೈದ್ಯರು ಪ್ರತಿಭಟನೆ ನಿಲ್ಲಿಸುವಂತೆ ಕೆಲವು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಗುರಿತಂತೆ ಸರ್ಕಾರದ ಪರ ವಕೀಲರು ಮುಖ್ಯಮಂತ್ರ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ಕೆಪಿಎಂಇಎ ಮಸೂದೆ ವಿರುದ್ಧ ಜಂಟಿ ಸಮತಿಯೊಂದಿೂಗೆ ಆರೋಗ್ಯ ಸಚಿವರು ಹಾಗೂ ಇನ್ನಿತರೆ ಸಚಿವರು ಮಾತುಕತೆ ನಡೆಸುತ್ತಾರೆಂದು ನಾವು ನಂಬಿದ್ದೇವೆ. ನ್ಯಾಯಾಲಯದ ಮನವಿಯವನ್ನು ನಾವು ಪರಿಗಣಿಸಿದ್ದೇವೆ. ನಮ್ಮ ಆಗ್ರಹಗಳ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸುತ್ತೇವೆಂದು ಹೇಳಿದ್ದಾರೆ. 
ಇದೇ ವೇಳೆ ವೈದ್ಯರ ಪ್ರತಿಭಟನೆಯಿಂದಾಗಿ ರಾಜ್ಯದಲ್ಲಿ ಸಾವನ್ನಪ್ಪಿದವರ ಕುರಿತಂದೆ ವೈದ್ಯರು ನೈತಿಕ ಹೊಣೆಯನ್ನು ಹೊರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಾವು ಯಾರಿಗೂ ಸಮಸ್ಯೆಯನ್ನು ನೀಡಿಲ್ಲ. ಯಾರ ಸಾವಿನ ಜವಬ್ದಾರಿಯನ್ನು ನಾವು ಹೊರುವುದಿಲ್ಲ. ಪ್ರತೀಯೊಂದು ತುರ್ತು ಚಿಕಿತ್ಸೆಗೆಂದು ಬಂದ ಪ್ರತೀಯೊಬ್ಬ ರೋಗಿಗೂ ನಾವು ಚಿಕಿತ್ಸೆ ನೀಡಿದ್ದೇವೆಂದು ತಿಳಿಸಿದ್ದಾರೆ. 
ವೈದ್ಯರು ಪ್ರತಿಭಟನೆಗಿಳಿದಿದ್ದ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕ ಆರೋಗ್ಯ ಹೋರಾಟಗಾರರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾಯ್ದೆ ಕುರಿತ ಪ್ರತಿಯನ್ನು ನೀಡಿದ್ದಾರೆ. ಕಾಯ್ದೆಯ ಪ್ರತಿಗಳನ್ನು ವೈದ್ಯರಿಗೆ ನೀಡಿರುವ ಹೋರಾಟಗಾರರು, ತಪ್ಪು ಮಾಹಿತಿಯನ್ನು ಪಸರಿಸುವ ಬದಲು, ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾಯ್ದೆ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಎಂದು ತಿಳಿ ಹೇಳಿದ್ದಾರೆ. 
ಕಾಯ್ದೆಯ ಪ್ರತಿಯೊಂದಿಗೆ ವೈದ್ಯರಿಗೆ ಗುಲಾಬಿಗಳನ್ನು ನೀಡಿ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡೆವು ಎಂದು ವಿನಯ್ ಶ್ರೀನಿವಾಸ ಅವರು ಹೇಳಿದ್ದಾರೆ. 
ಸಾಕಷ್ಟು ವೈದ್ಯರು ಕಾಯ್ದೆ ಕುರಿತಂತಿರುವ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಮಾಹಿತಿಯಿಲ್ಲದೆಯೇ ತಪ್ಪು ಗ್ರಹಿಕೆಯಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಗಗನಕ್ಕೇರುತ್ತಿರುವ ಚಿಕಿತ್ಸೆಗಳ ವೆಚ್ಚ ಹಾಗೂ ನಿಯಮಗಳ ವಿರುದ್ದ ನಡೆಯುತ್ತಿರುವವರಿಗೆ  ಕಡಿವಾಣ ಹಾಕಲು ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಅಥವಾ ಚಿಕಿತ್ಸೆಗಳಿಗೆ ಶುಲ್ಕ ನಿಗದಿ ಮಾಡುವ ಯಾವುದೇ ಪ್ರಸ್ತಾಪಗಳೂ ಕಾಯ್ದೆಯಲ್ಲಿಲ್ಲ. ಕಾಯ್ದೆ ಕುರಿತು ಮಾಹಿತಿಯಿಲ್ಲದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳನ್ನು ತಿಳಿದು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com