ಆಡಿಯೋ ಟೇಪ್ ಒಂದು ಇಂತಹುದೊಂದು ಆತಂಕ ಕಾರಣವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಸಿಸ್ ಮಾದರಿಯಲ್ಲಿ ಯುವಕರ ಗುಂಪೊಂದು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಮಂಗಳೂರಿನ ಸಂಘಟನೆಯೊಂದರ ಮುಖಂಡರು ಬ್ಯಾರಿ ಭಾಷೆಯಲ್ಲಿ ಮಾತನಾಡಿದ ಆಡಿಯೋ ತುಣುಕು ಈಗ ವಿವಾದದ ಕೇಂದ್ರ ಬಿಂದುವಾಗಿದ್ದು, ವಿಡಿಯೋದಲ್ಲಿ ಇಸಿಸ್ ಉಗ್ರ ಸಂಘಟನೆ ಕುರಿತಂತೆ ಮೌಲ್ವಿಗಳು ಮಾತನಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆಡಿಯೋದಲ್ಲಿ ಮಂಗಳೂರಿನ ಯುವಕರ ಗುಂಪೊಂದು ಸಿದ್ಧಾಂತವೊಂದರಿಂದ ಪ್ರಭಾವಿತರಾಗಿ ಈ ರೀತಿ ಸಂಘಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅಂತೆಯೇ ಐಸಿಸ್ ಮಾದರಿಯ ಕಪ್ಪು ಮತ್ತು ಕಂದು ಬಣ್ಣದ ಗೌನ್ ಹಾಕುತ್ತಿರುವ ಈ ಯುವಕರಲ್ಲಿ ಎಂಜಿನಿಯರ್ ಓದಿದ ಯುವಕರೂ ಇದ್ದಾರೆ. ಮಂಗಳೂರು ನಗರ ಮತ್ತು ಬಿ.ಸಿ.ರೋಡ್‌ಗಳಲ್ಲಿ ಇವರು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಆಡಿಯೋದಲ್ಲಿ ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಇಂತಹ ಯುವಕರಿದ್ದಾರೆ. ಈ ಗುಂಪು ಯಮೆನ್ ದೇಶದಲ್ಲಿರುವ ಉಗ್ರ ಕೇಂದ್ರಕ್ಕೆ ವಲಸೆ ಹೋಗುವ ಉದ್ದೇಶ ಹೊಂದಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಈಗ್ಗೆ 2 ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಪಡನ್ನಾ ಗ್ರಾಮದಲ್ಲಿ ಕೆಲವು ಯುವಕರು ದಿಢೀರ್ ನಾಪತ್ತೆಯಾಗಿ ಐಸಿಎಸ್ ಉಗ್ರ ಸಂಘಟನೆಗೆ ಸೇರಿದ್ದಾರೆ ಎಂಬ ಗಂಭೀರ ಸಂಗತಿ ವರ್ಷದ ಹಿಂದೆ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.