ಸರ್ಕಾರದಿಂದ ಬಂದಿರುವ ಮನವಿ ಬಗ್ಗೆ ಜಲಮಂಡಳಿಯ ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದು, ಜಲಮಂಡಳಿ ಈ ಕುರಿತು ಸಾಧ್ಯತಾ ವರದಿಯನ್ನು ಸಿದ್ದಪಡಿಸಲಿದೆ. ಪ್ರಸ್ತುತ ಹೂಡಿಯವರೆಗೆ ಬಿಡಬ್ಲ್ಯುಎಸ್ಎಸ್ ಬಿ ಕಾವೇರಿ ನೀರನ್ನು ಸರಬರಾಜು ಮಾಡುತ್ತಿದೆ. ಇನ್ನು ಹೆಚ್ಚುವರಿ 18 ಕಿಲೋ ಮೀಟರ್ ವರೆಗೆ ನೀರು ಪೂರೈಕೆ ಮಾಡಲು ಜಲಮಂಡಳಿಗೆ ಪೈಪ್ ಲೈನ್ ಹಾಕಬೇಕಾಗಿದೆ. ಹೊಸಕೋಟೆಯಲ್ಲಿ ಸುಮಾರು 1.5 ಲಕ್ಷ ಜನರು ವಾಸಿಸುತ್ತಿದ್ದಾರೆ.