ಮೈಸೂರು: ಮನೆಯ ನಾಲ್ವರು ಸದಸ್ಯರನ್ನು ಬದುಕಿಸಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಮನೆಯ ಛಾವಣಿ ಕುಸಿದು ಬಿದ್ದಾಗ ತನ್ನ ಕುಟುಂಬದ ನಾಲ್ವರನ್ನು ಬದುಕಿಸಿ 55 ....
ಕುಸಿದ ನಾಗೇಶ್ವರ ರಾವ್ ಮನೆ
ಕುಸಿದ ನಾಗೇಶ್ವರ ರಾವ್ ಮನೆ
Updated on
ಮೈಸೂರು: ಮನೆಯ ಛಾವಣಿ ಕುಸಿದು ಬಿದ್ದಾಗ ತನ್ನ ಕುಟುಂಬದ ನಾಲ್ವರನ್ನು ಬದುಕಿಸಿ 55 ವರ್ಷದ ವ್ಯಕ್ತಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಿನ್ನೆ ನಡೆದಿದೆ. 
ಈ ಘಟನೆ ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಮೈಸೂರಿನ ಶ್ರೀ ನಾಗರಾಜ ಟಾಕೀಸ್ ನ ಹಿಂದೆ ಸೊಪ್ಪಿನಕೇರಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ದಿನಗೂಲಿ ನೌಕರ ನಾಗೇಶ್ ರಾವ್ ಎಂದು ಗುರುತಿಸಲಾಗಿದೆ.
ನಾಗೇಶ್ ಮತ್ತು ಅವರ ಮನೆಯವರು ನಾರಾಯಣಾಚಾರ್ ಎಂಬವರಿಗೆ ಸೇರಿದ ಮನೆಯಲ್ಲಿ ವಾಸಿಸುತ್ತಿದ್ದರು. ಬೆಳಗಿನ ಜಾವ ಮನೆಯ ಗೋಡೆ ಕುಸಿಯುತ್ತಿದ್ದ ವೇಳೆ ನಾಗೇಶ್ ನಿದ್ದೆ ಮಾಡುತ್ತಿದ್ದರು. ದುರಂತರ ಪರಿಸ್ಥಿತಿ ಗೊತ್ತಾದ ತಕ್ಷಣ ನಾಗೇಶ್ ರಾವ್ ಎದ್ದು ತನ್ನ ತಾಯಿ ಲೀಲಾವತಿ ಪತ್ನಿ ಭಾರತಿ ಮತ್ತು ಪುತ್ರ ಜೀವನ್ ಮತ್ತು ಸಂಬಂಧಿಕ ರಾಜು ಅವರನ್ನು ಎಬ್ಬಿಸಿದರು. 
ನಾಗೇಶ್ವರ ರಾವ್ ಅವರು ಪ್ರತಿಯೊಬ್ಬರನ್ನೂ ಹೊರಗೆ ಕರೆದೊಯ್ಯುತ್ತಿದ್ದಾಗ ಮನೆಯ ಛಾವಣಿ ಕುಸಿಯಲು ಆರಂಭಿಸಿತು. ಕೊನೆಗೆ ಇಡೀ ಛಾವಣಿ ನಾಗೇಶ್ವರ್ ಅವರ ತಲೆ ಮೇಲೆ ಬಿದ್ದಿತು. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸುವ ವೇಳೆ ನಾಗೇಶ್ವರ್ ಅಸುನೀಗಿದ್ದರು. ಭಾರತಿಯವರು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com