ಟ್ವಿಟರ್ ನಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, "ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೆನ್ನುವುದು ನಮಗೆ ಬದುಕು-ಭಾವ ಮಾತ್ರವೇ ಅಲ್ಲ, ಭವ್ಯ ಭವಿತವ್ಯದ ಹೆದ್ದಾರಿ ಕೂಡ ಎಂದು ಹೇಳಿದ್ದಾರೆ. ಅಂತೆಯೇ "ಕನ್ನಡತನದ ಧೀಮಂತ ಆದರ್ಶವೇ ನಮ್ಮ ಅಭಿವೃದ್ಧಿ ಮಾದರಿಯ ಹಿಂದಿನ ಪ್ರೇರಣೆಯಾಗಿದ್ದು, ಕನ್ನಡತನದ ಕೇಂದ್ರದಲ್ಲಿ ವಿಶ್ವಮಾನವತ್ವವಿದೆ, ಕನ್ನಡ ವಿಶ್ವಮಾನ್ಯವಾಗಿದೆ ಎಂದು ಹೇಳಿದ್ದಾರೆ.