ಸರ್ಕಾರದ ಜಾಲತಾಣಗಳಲ್ಲಿ ಏಕರೂಪ ಕನ್ನಡ ಭಾಷೆ ಬಳಕೆ: ಸಿಎಂ ಸಿದ್ದುಗೆ ವರದಿ ಸಲ್ಲಿಸಿದ ಕೆಡಿಎ

ರಾಜ್ಯ ಸರ್ಕಾರದ ಎಲ್ಲಾ ಜಾಲತಾಣಗಳಲ್ಲಿ ಏಕರೂಪ ಕನ್ನಡ ಭಾಷೆ ಬಳಕೆ ಮಾಡುವಂತೆ ಕೋರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯೊಂದನ್ನು ಸಲ್ಲಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಜಾಲತಾಣಗಳಲ್ಲಿ ಏಕರೂಪ ಕನ್ನಡ ಭಾಷೆ ಬಳಕೆ ಮಾಡುವಂತೆ ಕೋರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯೊಂದನ್ನು ಸಲ್ಲಿಸಿದೆ. 

ರಾಜ್ಯ ಸರ್ಕಾರದ ಎಲ್ಲಾ ಜಾಲತಾಣಗಳಲ್ಲಿ ಏಕರೂಪ ಕನ್ನಡ ಭಾಷೆ ಬಳಕೆ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ವರದಿ ಸಲ್ಲಿಸಿದ್ದು, ವರದಿಯಲ್ಲಿ ಜಾಲತಾಣಗಳ ಅಭಿವೃದ್ಧಿಗೆ ಹಲವು ಸಲಹೆಗಳನ್ನು ಸೂಚಿಸಿದ್ದಾರೆ. 

ಈ ವರದಿಯನ್ನು ಪರಿಶೀಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಎಲ್ಲಾ ಜಾಲತಾಣಗಳಲ್ಲೂ ಮುಂದಿನ 1 ವರ್ಷದಲ್ಲಿ ಕನ್ನಡ ತಂತ್ರಾಂಶ ಬಳಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಕನ್ನಡ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ವಯಂ ಆಸಕ್ತಿಯಿದೆ. ಪ್ರಾಧಿಕಾರ ಅದಕ್ಕೆ ಪೂಕವಾದ ವರದಿಯನ್ನು ನೀಡಿದೆ. ಮುಂದಿನ ರಾಜ್ಯೋತ್ಸವದ ವೇಳೆಗೆ ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 

ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅವರು ಮಾತನಾಡಿ, ಏಕರೂಪ ಭಾಷೆ ಬಳಕೆ, ಜಾಲತಾಣಗಳ ಗುಣಮಟ್ಟ ಹಾಗೂ ಸುಲಭ ಬಳಕೆಯಂತಹ ಮೂರು ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ಸಿದ್ಧಪಡಿಸಲಾಗಿದೆ ರಾಜ್ಯ ಸರ್ಕಾರ 100ಕ್ಕೂ ಹೆಚ್ಚು ಜಾಲತಾಣಗಳನ್ನು ಹೊಂದಿದೆ. ಅದರಲ್ಲಿ ಶೇ.25ರಷ್ಟು ಜಾಲತಾಣಗಳಲ್ಲಿ ಮಾತ್ರ ಕನ್ನಡದ ಆಯ್ಕೆಗೆ ಅವಕಾಶವಿದೆ. ಮೊಬೈಲ್ ಆ್ಯಪ್ ಗಳಲ್ಲೂ ಕನ್ನಡ ಬಳಕೆ ಸಮರ್ಕಾಗಿಲ್ಲ. ಕನ್ನಡ ಭಾಷೆ ತಂತ್ರಜ್ಞಾನದಲ್ಲಿಯೂ ಬೆಳೆಯಬೇಕು ಎಂಬ ಕಾರಣದಿಂದ ಕಂಪ್ಯೂಟರ್ ತಂತ್ರಜ್ಞ ಟಿ.ಜಿ ಶ್ರೀನಿಧಿಯವರ ಸಂಪಾದಕತ್ವದಲ್ಲಿ ಕಂಪ್ಯೂಟರ್-ತಂತ್ರಜ್ಞಾನದ ಪದ ವಿವರಣೆ ಕೋಶವನ್ನು ಪ್ರಾಧಿಕಾರ ಹೊರ ತಂದಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com