ಚೀನಾದಿಂದ ಭಾರತಕ್ಕೆ ಯಾವುದೇ ಬೆದರಿಕೆಗಳಿಲ್ಲ: ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ

ಚೀನಾ ಹಾಗೂ ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆಗಳಿದ್ದು, ಉಭಯ ದೇಶಗಳ ವಿರುದ್ಧ ಒಮ್ಮೆಲೆ ಯುದ್ಧ ಮಾಡುವುದಕ್ಕೆ ಭಾರತ ಸಿದ್ಧವಿರಬೇಕೆಂದು ಒಂದೆಡೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳುತ್ತಿದ್ದರೆ, ಮತ್ತೊಂದೆಡೆ ಚೀನಾದಿಂದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಚೀನಾ ಹಾಗೂ ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆಗಳಿದ್ದು, ಉಭಯ ದೇಶಗಳ ವಿರುದ್ಧ ಒಮ್ಮೆಲೆ ಯುದ್ಧ ಮಾಡುವುದಕ್ಕೆ ಭಾರತ ಸಿದ್ಧವಿರಬೇಕೆಂದು ಒಂದೆಡೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳುತ್ತಿದ್ದರೆ, ಮತ್ತೊಂದೆಡೆ ಚೀನಾದಿಂದ ಭಾರತಕ್ಕೆ ಯಾವುದೇ ರೀತಿಯ ಬೆದರಿಕೆಗಳಿಲ್ಲ, ಟಿಬೆಲ್ ನಲ್ಲಿ ಚೀನಾ ಅಷ್ಟೊಂದು ಶಕ್ತಿಶಾಲಿಯಾಗಿಲ್ಲ ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ಹೇಳಿದ್ದಾರೆ. 
ಕರ್ನಾಟಕ ಏರ್ ಫೋರ್ಸ್ ಅಸೋಸಿಯೇಶನ್ ಹೆಚ್ಎಎಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಏರ್ ಚೀಫ್ ಮಾರ್ಷಲ್ ಎಲ್.ಎಂ.ಕತ್ರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಡೋಕ್ಲಾಮ್ ವಿವಾದ ಉಭಯ ರಾಷ್ಟ್ರಗಳ ನಡುವೆ ವೈಮನಸ್ಸನ್ನು ಸೃಷ್ಟಿಸಿದ್ದರೂ ಈಗಲೂ ಚೀನಾದಿಂದ ಭಾರತಕ್ಕೆ ಯಾವುದೇ ರೀತಿಯ ಬೆದರಿಗಳಿಲ್ಲ. ಉಭಯ ದೇಶಗಳ ನಡುವಿನ ವಾಯುಸೇನೆಯ ನಡುವೆ ವಿಶ್ವಾಸಾರ್ಹತೆಯ ಹೆಚ್ಚಾಗುವುದರಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ. ಗಡಿ ವಾಸ್ತವ ರೇಖೆಯಿಂದ ಈಗಲೂ ಉಭಯ ರಾಷ್ಟ್ರಗಳು 10 ಕಿ.ಮೀ ಅಂತರವನ್ನು ಕಾಯ್ದುಕೊಂಡಿದೆ. ವಿವಾದ ಇತ್ಯರ್ಥಗೊಂಡ ಬಳಿಕ ಉಭಯ ರಾಷ್ಟ್ರಗಳಿಂದ ಯಾವುದ ರೀತಿಯ ನಿಯಮ ಉಲ್ಲಂಘನೆಗಳಾಗಿಲ್ಲ. ಆದರೆ, ಚೀನಾ ಟಿಬೆಟ್ ನಲ್ಲಿ ವೈಮಾನಿಕ ಅಸ್ತಿತ್ವ ತೋರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. 
ಬೆಂಗಳೂರಿನಲ್ಲಿ ಏರೋ ಇಂಡಿಯಾ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಭಾಗವಹಿಸಲು ಆಗಮಿಸಿದ್ದ ಸೇನಾ ಕಮಾಂಡರ್ ಚೆಂಗ್ ಡು ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದೆ. ಈ ವೇಳೆ ಉಭಯ ರಾಷ್ಟ್ರಗಳ ಪರಿಸ್ಥಿತಿ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಲಾಗಿತ್ತು. ಟಿಬೆಟ್ ನಲ್ಲಿ ಚೀನಾ ವೈಮಾನಿಕ ಅಸ್ತವತ್ವ ತೋರಿಸಿಕೊಳ್ಳುತ್ತಿರುವ ನಿಜ. ಗಡಿಯಲ್ಲಿ ಅವರ ಬಲ ಹೆಚ್ಚಾಗಲಿ ಅಥವಾ ಆಗದೇ ಹೋಗಲಿ ಗೂಗಲ್ ಅರ್ಥ್ ನಲ್ಲಿರುವ ಸ್ಯಾಟಲೈಟ್ ಚಿತ್ರಣಗಳನ್ನು ನೋಡಿದರೆ, ಟಿಬೆಟ್ ಆಕ್ರಮಣಕ್ಕೊಳಗಾಗದೆ ಇರುವುದು ಕಂಡು ಬರುತ್ತದೆ. ಪ್ರಾದೇಶಿಕ ಸಂಪರ್ಕಕ್ಕಾಗಿ ಚೀನಾ ಈ ರೀತಿ ಮಾಡುತ್ತಿದೆ. 400 ಕಿಮೀ ದೂರದಲ್ಲಿಯೂ ವಾಯುನೆಲೆಗಳಿವೆ. ಕೆಲವರು ಇವುಗಳನ್ನು ಲೆಕ್ಕ ಹಾಕಿಕೊಂಡು ಚೀನಾದಿಂದ ಭಾರತಕ್ಕೆ ಬೆದರಿಕೆಯಿದೆ ಎಂದು ಹೇಳುತ್ತಾರೆ. 
ಭಾರತ ಉತ್ತರ, ಪೂರ್ವವಲಯದಲ್ಲಿ ಸೇನಾ ಕಾರ್ಯಾಚರಣೆಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನ ಆಂತರಿಕ ಭದ್ರತೆ ಸವಾಲಾಗಿದೆ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಾವತ್ ಅವರು, ಭಾರತವು ಎರಡು ದಿಕ್ಕುಗಳ ಕಡೆಗೆ ಯುದ್ಧದ ತಯಾರಿ ಆರಂಭಿಸಬೇಕಿದೆ. ಚೀನಾ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಮತ್ತೊಂದೆಡೆ ಪಾಕಿಸ್ತಾನ ಜತೆ ಮರು ಹೊಂದಾಣಿಕೆಗೆ ಯಾವುದೇ ಅವಕಾಶವಿಲ್ಲದಂತೆ ಕಾಣುತ್ತಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com