ನಗರದ ಎಲ್ಲಾ ರಸ್ತೆಗಳಿಗೆ ವೈಟ್ ಟಾಪಿಂಗ್: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಂದಿನ 5 ವರ್ಷಗಳಲ್ಲಿ ನಗರದ ಎಳ್ಲಾ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭರವಸೆ ನೀಡಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ನಗರದ ಎಳ್ಲಾ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭರವಸೆ ನೀಡಿದ್ದಾರೆ. 
ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ ಹಾಗೂ ಶಂಕರಮಠ ವಾರ್ಡಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿರುವ ಅವರು, ನಗರದ ಕೇಂದ್ರ ಭಾಗದಲ್ಲಿರುವ ವಿವಿಧ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡುವುದಕ್ಕಾಗಿ ಈಗಾಗಲೇ ರೂತ 1 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಮುಂದಿನ ಅಧಿಕಾರ ಅವಧಿಯಲ್ಲಿ ನಗರ ಎಳ್ಲಾ ರಸ್ತೆಗಳ್ನು ವೈಟ್ ಟಾಪಿಂಗ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 
ಬಳಿಕ ಇಂದಿರಾ ಕ್ಯಾಂಟೀನ್ ಬಗ್ಗೆ ಮಾತನಾಡಿರುವ ಅವರು, ಆ.15ರಂದು ಉದ್ಘಾಟನೆಗೊಂಡ 101 ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತಿ ದಿನ 1.46ಲಕ್ಷ ಜನ ಊಟ ಮಾಡುತ್ತಿದ್ದಾರೆ. ಅ.2 ರಂದು 50 ಕ್ಯಾಂಟೀನ್ ಉದ್ಘಾಟನೆಗೊಳ್ಳುತ್ತಿದ್ದು, ಉಳಿದ 47 ಕ್ಯಾಂಟೀನ್ ಗಳನ್ನು ನವೆಂಬರ್ 1 ರಂದು ಉದ್ಘಾಟನೆ ಮಾಡಲಾಗುತ್ತದೆ. ಮುಂದಿನ ದಿನಗಳ್ಲಲಿ ಕೆ.ಸಿ.ಜನರಲ್, ಜಯದೇವ, ಕಿದ್ವಾಯಿ, ವಿಕ್ಟೋರಿಯಾ, ಬೌರಿಂಗ್ ಸೇರಿದಂತೆ ವಿವಿಧ ಆರು ಆಸ್ಪತ್ರೆಗಳಲ್ಲಿಯೂ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಹರಿಜನ ಕಾಲೋನಿ ಸೇರಿದಂತೆ ವಿವಿಧ ಕೊಳಗೇರಿಯಲ್ಲಿ ವಾಸ ಮಾಡುತ್ತಿರುವ ಜನರಿಗೆ 10,000 ಲೀಟನ್ ನೀರನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಬಳಿಕ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕೆಟ್ಟ ಹೆಸರು ಪಡೆದುಕೊಂಡು ಈಗ ರಾಜ್ಯಾದ್ಯಂತ ಸುಳ್ಳು ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ರಾಜಕಾಲುವೆ ಒತ್ತುವರಿ ತೆರವು ಗೊಳಿಸದೆ ಅಭಿವೃದ್ಧಿಪಡಿಸದೆ ಬಿಟ್ಟಿದ್ದರು. ಇದರಿಂದ ಭಾರೀ ಮಳೆ ಬಂದಾಗ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿದ್ದು. ನಾವು ರಾಜಕಾಲುವೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ರೂ.1 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ಇನ್ನೊಂದು ವರ್ಷದೊಲಗೆ ನಗರ ಪ್ರವಾಹಕ್ಕೆ ತುತ್ತಾಗುವುದನ್ನು ತಪ್ಪಿಸಲಿದ್ದೇವೆಂದು ತಿಳಿಸಿದ್ದಾರೆ. 

ಶಂಕು ಸ್ಥಾಪನೆ ಮಾಡಿದ ಪ್ರಮುಖ ಯೋಜನೆಗಳು...
ವೃಷಭಾವತಿ ನಾಲೆಗೆ ಸ್ನೇಹ ಸೇತುವೆ ಮತ್ತು ಮಳೆ ನೀರು ಚರಂಡಿ ಅಭಿವೃದ್ಧಿ: ರೂ.2.45 ಕೋಟಿ
ಕ್ರೀಡಾ ಸಂಕೀರ್ಣ ನಿರ್ಮಾಣ: ರೂ. 5 ಕೋಟಿ
ಕೆಂಪೇಗೌಡ ಆಟದ ಮೈದಾನದ ಹೊರಾಂಗಣ ಅಭಿವೃದ್ಧಿ: ರೂ.1 ಕೋಟಿ
ಕೆಂಪೇಗೌಡ ಉದ್ಯಾನ ಅಭಿವೃದ್ಧಿ; ರೂ.1 ಕೋಟಿ
ಬೆಂಗಳೂರು ಒನ್ ಕೇಂದ್ರ: ರೂ. 50 ಲಕ್ಷ
ಪೈಪ್ ಲೈನ್ ಉದ್ಯಾನದಲ್ಲಿ ಶೆಲ್ಟರ್ ನಿರ್ಮಾಣ: ರೂ. 35 ಲಕ್ಷ
ಎಸ್'ಸಿ/ಎಸ್'ಟಿ ಫಲಾನುಭವಿಗಳಿಗೆ ವಸತಿ ಯೋಜನೆ: ಒಂದು ಕುಟುಂಬಕ್ಕೆ ರೂ.4 ಲಕ್ಷ
ಪೌರ ಕಾರ್ಮಿಕರಿಗೆ ಶ್ರಮ ವಿಹಾರ ಕೇಂದ್ರ: ರೂ.48 ಲಕ್ಷ
ಬ್ಯಾಡ್ಮಿಂಟರ್ ಕೋರ್ಟ್: ರೂ.37 ಲಕ್ಷ
ಶುದ್ಧ ಕುಡಿಯುವ ನೀರಿನ ಘಟಕ: ರೂ. 20 ಲಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com