ಹೀಗಾಗಿ ನಿನ್ನೆ ಕಳ್ಳರಿಗೆ ಈ ಹಣ ಸಿಕ್ಕಿಲ್ಲ. ಆದರೆ ದೇಗುಲದಲ್ಲಿ ದೇವರ ವಿಗ್ರಹಗಳು, ಅಲಂಕಾರಿಕ ವಸ್ತುಗಳು, ಸೇರಿದಂತೆ ಹಲವು ವಸ್ತುಗಳು ಇದ್ದವು. ಈ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೇಗುಲದಲ್ಲಿ ಅಳವಡಿಸಲಾಗಿರುವ ದೇಗುಲದ ಸಿಸಿಟಿವಿ ಕ್ಯಾಮೆರಾಗಳ ದಾಖಲೆಯನ್ನೂ ಕೂಡ ಪೊಲೀಸರು ಪಡೆದಿದ್ದಾರೆ ಎನ್ನಲಾಗಿದೆ.