ನನಗೆ 32 ವರ್ಷದಿಂದ ಮತದಾನ ಮಾಡಲು ಆಗಿಲ್ಲ: ನ್ಯಾಯಾಧೀಶ ಬೀಳಗಿ

ನನ್ನ ಸೇವಾವಧಿಯ ಕಳೆದ 32 ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ನನಗೆ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ ತಿಳಿಸಿದ್ದಾರೆ...
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ
ಮಂಗಳೂರು: ನನ್ನ ಸೇವಾವಧಿಯ ಕಳೆದ 32 ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ನನಗೆ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ ತಿಳಿಸಿದ್ದಾರೆ. 
ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ರಕ್ತದಾನ ಜಾಗೃತಿಗಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿರುವ ಅವರು, 1986ರಲ್ಲಿ ನಾನು ಸೇವೆ ಆರಂಭಿಸಿದೆ. ಪ್ರತೀ ಬಾರಿಯೂ ನಾನಾ ಕಾರಣಗಳಿಂಗ ಮತ ಚಲಾಯಿಸಲು ಆಗಲಿಲ್ಲ ಎಂದು ಹೇಳಿದ್ದಾರೆ. 
ಬೆಂಗಳೂರಿನಲ್ಲಿದ್ದಾ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದ್ದರು ಚುನಾವಣೆ ಸಂದರ್ಭದಲ್ಲೇ ವರ್ಗಾವಣೆಯಾಗುತ್ತಿತ್ತು. ಕಲಬುರ್ಗಿಯಲ್ಲಿದ್ದಾಗ ಮತ ಚಲಾಯಿಸಲು ಹೋದರೂ ಮತದಾರರ ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. ಹೀಗಾಗಿ ಕಳೆದ 32 ವರ್ಷಗಳಿಂದ ನಾನು ಮತದಾನದಿಂದ ವಂಚಿತನಾಗಿದ್ದೇನೆಂದು ತಿಳಿಸಿದ್ದಾರೆ. 
ಮತದಾನ ಮಾಡಲೇಬೇಕೆಂದು ನಿರ್ಧರಿಸಿದ್ದೇನೆ. ನಿವೃತ್ತಿ ಅಂಚಿನಲ್ಲಿ ಇದು ನನ್ನ ಸೇವಾವಧಿಯ ಮೊದಲ ಮತದಾನವಾಗಲಿದೆ ಎಂದ ಅವರು, ಮತದಾರರು ಉತ್ತಮವಾದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿಕೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com