ಡಾ. ಅತ್ರೇಯೀ ಮಜ್ಹುದಾರ್
ರಾಜ್ಯ
ಬೆಂಗಳೂರಿನ ಮ್ಯಾರಿಯಟ್ ಹೊಟೇಲ್ ಬಳಿಯಿಂದ ಪಿಹೆಚ್ ಡಿ ವಿದ್ಯಾರ್ಥಿನಿ ನಾಪತ್ತೆ
ಸಿಲಿಕಾನ್ ಸಿಟಿ ಬೆಂಗಳೂರಿನ ಮ್ಯಾರಿಯಟ್ ಹೊಟೇಲ್ ಬಳಿಯಿಂದ ಪಿ ಹೆಚ್. ಡಿ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಮ್ಯಾರಿಯಟ್ ಹೊಟೇಲ್ ಬಳಿಯಿಂದ ಪಿ ಹೆಚ್. ಡಿ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಡಾ. ಅತ್ರೇಯೀ ಮಜ್ಹುದಾರ್ ನಾಪತ್ತೆಯಾದ ವಿದ್ಯಾರ್ಥಿನಿ. ಮಾನವಶಾಸ್ತ್ರಜ್ಞಳಾಗಿದ್ದ ಈಕೆ ಏಪ್ರಿಲ್ ಆರರಿಂದ ಈಕೆ ಬೆಳ್ಳಂದೂರಿನ ಮ್ಯಾರಿಯಟ್ ಹೊಟೇಲ್ ಬಳಿಯಿಂದ ಕಾಣೆಯಾಗಿದ್ದಾಳೆ.
ಡಾ. ಅತ್ರೇಯೀ ಮಜ್ಹುದಾರ್ ರಾಷ್ಟ್ರೀಯ ಕಾನೂನು ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು.
ಆಕೆಯನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಸ್ನೇಹಿತರು ಹಾಗೂ ಪೋಷಕರು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ