ಬೆಂಗಳೂರು: ಐದು ದಿನಗಳಿಂದ ಸಂಶೋಧಕಿ ನಾಪತ್ತೆ; ಪೊಲೀಸರಿಗೆ ಸುಳಿವು ಸಿಕ್ಕಿಲ್ಲ

ಮಹಿಳಾ ಮಾನವಶಾಸ್ತ್ರಜ್ಞೆ ಅತ್ರೆಯೀ ಮಜ್ಹುದಾರ್ (35) ಬೆಳ್ಳಂದೂರಿನ ಹೋಟೆಲ್ ಬಳಿಯಿಂದ ನಾಪತ್ತೆಯಾಗಿ ಐದು ದಿನ ಕಳೆದರೂ ಇನ್ನೂ ಸುಳಿವು ಮಾತ್ರ ಸಿಕ್ಕಿಲ್ಲ.
ಬೆಂಗಳೂರಿನ ಸಂಶೋಧಕಿ
ಬೆಂಗಳೂರಿನ ಸಂಶೋಧಕಿ

ಬೆಂಗಳೂರು: ಮಹಿಳಾ ಮಾನವಶಾಸ್ತ್ರಜ್ಞೆ ಅತ್ರೆಯೀ ಮಜ್ಹುದಾರ್ (35)   ಬೆಳ್ಳಂದೂರಿನ ಹೋಟೆಲ್ ಬಳಿಯಿಂದ ನಾಪತ್ತೆಯಾಗಿ ಐದು ದಿನ ಕಳೆದರೂ ಇನ್ನೂ ಸುಳಿವು ಮಾತ್ರ ಸಿಕ್ಕಿಲ್ಲ.

ಆಕೆಯ ಕುಟುಂಬದವರು ಮತ್ತು ಸ್ನೇಹಿತರು ಪೋಟೋವನ್ನು ದೇಶಾದ್ಯಂತ  ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ಹರಿ ಬಿಡುವ ಮೂಲಕ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಐದು ತಿಂಗಳ ಹಿಂದೆ ಕುಮಾರ್ ಅಜಿತಾಬ್ ನಾಪತ್ತೆಯಾಗಿದ್ದರೂ ಸಿಐಡಿ ಅಧಿಕಾರಿಗಳು ಇಲ್ಲಿಯವರೆಗೂ ಸಣ್ಣ ಸುಳಿವು ಸಿಕ್ಕಿಲ್ಲ. ಅತ್ರೆಯೀ ಪ್ರಕರಣವೂ ಅವರಂತೆಯೇ ಆಗಿದೆ.

ಬೆಳ್ಳಂದೂರಿನ ನಿವಾಸಿಯಾದ ಅತ್ರೇಯೀ ಏ.4 ರಂದು ಟೊರೊಂಟೊದಿಂದ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿ ಪ್ರಸ್ತುತ  ಪೋಸ್ಟ್ ಡಾಕ್ಟರಲ್ ಫೆಲೋಶಿಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಏ. 4 ರಂದು ಮಾರತ್ ಹಳ್ಳಿಯ ನೊವೊಟೆಲ್ ಹೋಟೆಲ್ ನಲ್ಲಿ ಮಜ್ಹುದಾರ್ ತಂಗಿದ್ದು, ಏ.5 ರಂದು ಬೆಳ್ಳಂದೂರಿನ  ಮ್ಯಾರಿಯಟ್ ಹೋಟೆಲ್ ಗೆ ಬರುತ್ತಾರೆ. ಏ. 6 ರಂದು ಆಕೆ ಹೊರಗೆ ಹೋಗಿರುವ ದೃಶ್ಯ ಹೋಟೆಲ್ ನಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿದ್ದು, ಪೊಲೀಸರು ಪರಿಶೀಲಿಸಿದ್ದಾರೆ. ಆಕೆಯೊಬ್ಬಳೆ ಹೊರಗೆ ಹೋಗಿರುವುದನ್ನು  ಕ್ಯಾಮರಾ ಮೂಲಕ ನೋಡಿದ್ದಾರೆ.

ಅತ್ರೇಯೀ ಪೋನ್ ಟೊರೊಂಟೊದಲ್ಲಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಏ.3 ರಂದು  ಆಕೆ ತನ್ನ ಕರೆ ಮಾಡಿರುವುದಿಲ್ಲ. ಮಾರನೆ ದಿನ ನವದೆಹಲಿಗೆ ಬಂದಿಳಿದಿದ್ದು, ಬೆಂಗಳೂರಿಗೆ ಬರುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ.

ಏ. 4 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ  ಬಿಪ್ ಲಾಬ್ ಎಂಬವರು ಆಕೆಯನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದು, ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನಂತರ ಆಕೆ ಅವರ ಕೊಠಡಿಗೆ ಹೋಗಿ ಮಲಗಿದ್ದಾಳೆ.ಆದರೆ, ಕೆಲ ಸಮಯದ ನಂತರ  ರಾತ್ರಿ 9 ಗಂಟೆ ಸುಮಾರಿನಲ್ಲಿ ಹೊರಗೆ ಹೋಗಿದ್ದಾರೆ .

 ಆಕೆಯ ಪೋನ್ ಕೂಡಾ ಮನೆಯಲ್ಲಿಯೇ ಇರುವುದಾಗಿ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.  ಆದ್ದರಿಂದ ಪೊಲೀಸರಿಗೆ ಆಕೆಯನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿ ಪರಿಣಮಿಸಿದೆ.

ಆಕೆಯ ಸಂಬಂಧಿಕರೊಂದಿಗೆ ಸೇರಿಕೊಂಡು ಹತ್ತಿರದ ಆಸ್ಪತ್ರೆ, ಪಿಜಿ, ಹೋಟೆಲ್ ಸೇರಿದಂತೆ ಎಲ್ಲಾ ಕಡೆ ಕಾಗದ ಪತ್ರ ಹಂಚುತ್ತಿದ್ದು, ಆಕೆ ಕಾಣಿಸಿಕೊಂಡರೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com