ಬಸ್ ಹೈಜಾಕ್ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸಿನಿಮೀಯ ರೀತಿಯಲ್ಲಿ ನಡುರಸ್ತೆಯಲ್ಲಿ ಖಾಸಗಿ ಬಗ್'ಗೆ ಅಡ್ಡ ಹಾಕಿ ಪ್ರಯಾಣಿಕರ ಸಮೇತ ಬಸ್ ಹೈಜಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಮೈಸೂರು ರಸ್ತೆಯಲ್ಲಿ ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ಸಿನಿಮೀಯ ರೀತಿಯಲ್ಲಿ ನಡುರಸ್ತೆಯಲ್ಲಿ ಖಾಸಗಿ ಬಗ್'ಗೆ ಅಡ್ಡ ಹಾಕಿ ಪ್ರಯಾಣಿಕರ ಸಮೇತ ಬಸ್ ಹೈಜಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಮೈಸೂರು ರಸ್ತೆಯಲ್ಲಿ ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. 
ಬಂಧಿತ ವ್ಯಕ್ತಿಯನ್ನು ಚಿಕ್ಕರಂಗೇಗೌಡ ಎಂದು ಗುರ್ತಿಸಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
ಕಲಾಸಿಪಾಳ್ಯದಲ್ಲಿನ ರೂಪಿ ಲಾಮಾ ಟ್ರಾವೆಲ್ಸ್ ನ ನೌಷಾದ್ ಎಂಬುವವರು ಫುಲ್ಟ್ರಾನ್ ಹಣಕಾಸು ಸಂಸ್ಥೆಯಿಂದ ಸಾಲ ಪಡೆದುಕೊಂಡಿದ್ದರು. ಸಾಲದ ಕಂತು ಪಾವತಿಸಿಲ್ಲ ಎಂಬ ಕಾರಣಕ್ಕೆ ಫುಲ್ಟ್ರಾನ್ ಸಂಸ್ಥೆ ಹಣ ವಸೂರಿ ಕಾರ್ಯವನ್ನು ಗ್ಲೋಬಲ್ ಫೈನಾನ್ಸ್ ಸಂಸ್ಥೆಗೆ ವಹಿಸಿತ್ತು. ಸಾಲ ವಸೂಲಿ ಸಂಸ್ಥೆಯ ಸಿಬ್ಬಂದಿ ಏ.27ರಂದು 42 ಪ್ರಯಾಣಕರ ಸಮೇತ ಬಸ್'ನ್ನು ಹೈಜಾಕ್ ಮಾಡಿ, ರಾಜರಾಜೇಶ್ವರಿ ನಗರದ ಗೋಡೌನ್ ಗೆ ತೆಗೆದುಕೊಂಡು ಹೋಗಿದ್ದರು. 
ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿ ಚಿಕ್ಕರಂಗೇಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕುಟುಂಬ ಸಮೇತ ಪರಾರಿಯಾಗುತ್ತಿದ್ದ. ಆತನ ಕಾರಿನ ಸಂಖ್ಯೆ ಮತ್ತು ಕಾರಿಗೆ ಅಳವಡಿಸಲಾಗಿದ್ದ ಜಿಪಿಎಸ್ ನೆರವಿನಿಂದ ಆರೋಪಿಯನ್ನು ಬೆನ್ನತ್ತಿದ್ದ ಪೊಲೀಸರು ತಂಡ ಕೊನೆಗೂ ನಿನ್ನೆ ಮೈಸೂರು ರಸ್ತೆಯಲ್ಲಿ ಬಂಧನಕ್ಕೊಳಪಡಿಸಿದೆ. ಈತ ನೀಡಿದ ಮಾಹಿತಿ ಆಧಾರದ ಮೇರೆಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com