ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಒಂದು ವರ್ಷ ನಿಷೇಧ

ಸಿಲಿಕಾನ್ ಸಿಟಿಯ ಸೌಂದರ್ಯ ಹಾಳು ಮಾಡುತ್ತಿದ್ದ ರಾಜಕಾರಣಿಗಳ ಫ್ಲೆಕ್ ಹಾಗೂ ಬ್ಯಾನರ್ ಗಳಿಗೆ ಕೊನೆಗೂ ಕಡಿವಾಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿಯ ಸೌಂದರ್ಯ ಹಾಳು ಮಾಡುತ್ತಿದ್ದ ರಾಜಕಾರಣಿಗಳ ಫ್ಲೆಕ್ ಹಾಗೂ ಬ್ಯಾನರ್ ಗಳಿಗೆ ಕೊನೆಗೂ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ(ಬಿಬಿಎಂಪಿ) ನಿರ್ಧರಿಸಿದ್ದು, ನಗರದಲ್ಲಿ ನಾಳೆಯಿಂದಲೇ ಒಂದು ವರ್ಷಗಳ ಕಾಲ ಫ್ಲೆಕ್ಸ್, ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಸಂಪೂರ್ಣ ನಿಷೇಧಿಸಿದೆ.
ಇಂದು ನಡೆದ ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಾಳೆಯಿಂದ ಜಾರಿಗೆ ಬರುವಂತೆ ಒಂದು ವರ್ಷಗಳ ಕಾಲ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಮತ್ತು ಭಿತ್ತಿಪತ್ರಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಒಂದು ವೇಳೆ ನಿಷೇಧ ಉಲ್ಲಂಘಿಸಿದರೆ ಒಂದು ಲಕ್ಷ ರುಪಾಯಿ ದಂಡ  ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ. ಅಲ್ಲದೆ ಇದೇ ವಿಚಾರವನ್ನು ಹೈಕೋರ್ಟ್ ಗೆ ತಿಳಿಸುವುದಾಗಿ ಹೇಳಿದ್ದಾರೆ.
ಈಗೀರುವ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲು 15 ದಿನ ಕಾಲಾವಕಾಶ ನೀಡಲಾಗಿದ್ದು, 15 ದಿನದಲ್ಲಿ ತೆರವುಗೊಳಿಸದಿದ್ದರೆ ಅವರ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
2016ರ ಜನವರಿ ಬಳಿಕ ಪರವಾನಗಿ ನವೀಕರಿಸಿಲ್ಲ, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಳವಡಿಸಿರುವ ಫ್ಲೆಕ್ಸ್, ಹೋರ್ಡಿಂಗ್ಸ್ ಅಧಿಕೃತವಲ್ಲ ಎಂದು ಮಾಹಿತಿ ನೀಡಿದ ಪ್ರಸಾದ್, ಒಂದು ವೇಳೆ ಇನ್ಮುಂದೆ ನಿಯಮದ ಪ್ರಕಾರ ಗೋಡೆ, ಮರದ ಮೇಲೆ ಬ್ಯಾನರ್, ಫ್ಲೆಕ್ಸ್, ಭಿತ್ತಿಪತ್ರ ಹಚ್ಚಿದರೆ ಒಂದು ಲಕ್ಷ ರುಪಾಯಿ ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com