ರಾಮನಗರದಲ್ಲಿ ಶಂಕಿತ ಉಗ್ರನ ಬಂಧಿಸಿದ ಎನ್ಐಎ

ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಾ ರಾಮನಗರದಲ್ಲಿ ನೆಲೆಯೂರಿದ್ದ ಜಮತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ ಉಗ್ರ ಸಂಘಟನೆಗೆ ಸೇರಿದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಮನಗರ: ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಾ ರಾಮನಗರದಲ್ಲಿ ನೆಲೆಯೂರಿದ್ದ ಜಮತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ ಉಗ್ರ ಸಂಘಟನೆಗೆ ಸೇರಿದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 
ಬಂಧಿತ ಶಂಕಿತ ಉಗ್ರರ 2014ರಲ್ಲಿ ನಡೆದ ಬುರ್ದ್ವಾನ್ ಸ್ಫೋಟ ಹಾಗೂ ಬಿಹಾರ ರಾಜ್ಯದ ಬೋಧ್ ಗಯಾ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ. 
ಬಂಧಿತನನ್ನು ಮುನೀರ್ ಶೇಖ್ (25) ಎಂದು ಗುರ್ತಿಸಲಾಗಿದೆ. ಈತ ರಾಮನಗರದ ತೃಪ್ ಲೇನ್ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಮುನೀರ್ ಬಂಧನದ ವೇಳೆ ಆತನಿಂದ ಲ್ಯಾಪ್ ಟಾಪ್, ಜಿಲೇಟಿನ್ ಪುಡಿ, ಪ್ರವಾಸಿ ತಾಣ, ದೇಗುಲ, ಮಸೀದಿಗಳ ಮ್ಯಾಪ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com