ಮಡಿಕೇರಿ: ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಉಂಟಾಗಿದ್ದ ಭೂಕುಸಿತ ಮತ್ತಷ್ಟು ಹೆಚ್ಚಾಗಿ ಅಪಾಯಕಾರಿ ಸ್ಥಿತಿಯಲ್ಲಿದೆ. ಭಾರಿ ಮಳೆ ಹಾಗೂ ಶಿರಾಡಿಘಾಟ್ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಹೆದ್ದಾರಿಯ ಹಲವು ಭಾಗ ಶಿಥಿಲವಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಹೆದ್ದಾರಿ ಬಂದ್ ಮಾಡಿ ಮಡಿಕೇರಿ ಪಟ್ಟಣದ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಪರ್ಯಾಯ ರಸ್ತೆ ತೀರಾ ಚಿಕ್ಕದಾಗಿರುವುದರಿಂದ ವಾಹನಗಳು ಸಂಚರಿಸುವುದಕ್ಕೆ ತೀರ ಕಷ್ಟವಾಗುತ್ತಿದೆ, ಹೀಗಾಗಿ ಸುಮಾರು ಕಿಮೀ ಗಟ್ಟಲೇ ವಾಹನಗಳು ನಿಂತಿದ್ದವು, ಇನ್ನೂಈ ಪರ್ಯಾಯ ರಸ್ತೆಗಳು ಕೂಡ ಸಂಚಾರಕ್ಕೆ ಅಪಾಯಕಾರಿಯಾಗಿವೆ.
ರಸ್ತೆಗಳು ಶಿಥಿಲಗೊಂಡಿರುವುದರಿಂದ ರಾತ್ರಿ ಸಂಚಾರ ಮತ್ತಷ್ಟು ಅಪಯಕಾರಿಯಾಗಿದೆ, ಆದರೆ ಬೇರೆ ದಾರಿಯಿಲ್ಲದೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ, ಯಾವುದೇ ದುರಂತಗಳು ಸಂಭವಿಸದಂತೆ ಕ್ರಮಕೈಗೊಳ್ಳಲು ಅದಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಶ್ರೀ ವಿದ್ಯಾ ತಿಳಿಸಿದ್ದಾರೆ.
ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಸುಪಾ ಜಲಾಶಯ 5 ವರ್ಷಗಳ ಭರ್ತಿಯಾಗಿದ್ದು. ಗರಿಷ್ಟಮಟ್ಟ ಕಲುಪಿದೆ.