ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ವ್ಹೀಲಿಂಗ್ ಫೋಟೋ ಫೇಸ್ ಬುಕ್ ಗೆ ಹಾಕಿ ಪೊಲೀಸರ ಅತಿಥಿಯಾದ ಯುವಕ!
ವ್ಹೀಲಿಂಗ್ ಮಾಡುತ್ತಿದ್ದ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದ 22 ವರ್ಷದ ಯುವಕ ಆರ್ ಟಿ ನಗರ ಪೊಲೀಸರ ಅತಿಥಿಯಾಗಿದ್ದಾನೆ...
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ವ್ಹೀಲಿಂಗ್ ಮಾಡುತ್ತಿದ್ದ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದ 22 ವರ್ಷದ ಯುವಕ ಆರ್ ಟಿ ನಗರ ಪೊಲೀಸರ ಅತಿಥಿಯಾಗಿದ್ದಾನೆ.
ಹೆಬ್ಬಾಳ ನಿವಾಸಿ 22 ವರ್ಷದ ಆರ್ ಮನೋಹರ್, ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ವ್ಹೀಲಿಂಗ್ ಫೋಟೋ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದ, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿ ಆರ್,ಟಿ ನಗರ ಮುಖ್ಯರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ, ಇದನ್ನು ಆತನ ಸ್ನೇಹಿತ ರೆಕಾರ್ಡ್ ಮಾಡಿದ್ದ,. ಇದರಿಂದಾಗಿ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಫೇಸ್ ಬುಕ್ ನಲ್ಲಿ ವಿದ್ಯಾರ್ಥಿ ಹಾಕಿದ್ದ ವ್ಹೀಲಿಂಗ್ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನಮಗೆ ಮಾಹಿತಿ ಬಂದಿತ್ತು, ಫೇಸ್ ಬುಕ್ ಮೂಲಕ ಆತನ ಫೋನ್ ನಂಬರ್ ಕಲೆ ಹಾಕಿ, ಆನಂತರ ನಂತರ ಆತನನ್ನು ಬಂಧಿಸಿದ್ದೇವೆ, ಆತನ ಬೈಕ್ ಸೀಜ್ ಮಾಡಲಾಗಿದೆ, ಡ್ರೈವಿಂಗ್ ಲೈಸೆನ್ಸ್ ರದ್ದು ಗೊಳಿಸಲು ಆರ್ ಟಿಓ ಕಚೇರಿಗೆ ಕಳುಹಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ