ರಾಜ್ಯದಲ್ಲೇ ಮಂಗಳೂರು ಅತ್ಯಂತ ವಾಸಯೋಗ್ಯ ನಗರ: ಸಮೀಕ್ಷೆ

ರಾಜ್ಯದಲ್ಲೇ ಮಂಗಳೂರು ಅತ್ಯಂತ ವಾಸಯೋಗ್ಯ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ದೇಶದ ವಾಸಯೋಗ್ಯ 111 ನಗರಗಳ ಪಟ್ಟಿಯನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ರಾಜ್ಯದಲ್ಲೇ ಮಂಗಳೂರು ಅತ್ಯಂತ ವಾಸಯೋಗ್ಯ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ದೇಶದ ವಾಸಯೋಗ್ಯ 111 ನಗರಗಳ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು 41ನೇ ಸ್ಥಾನವನ್ನು ಪಡೆದುಕೊಂಡಿದೆ.
ಸಚಿವಾಲಯ ಮೊದಲ ಬಾರಿಗೆ ಈ ರೀತಿಯ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳನ್ನು ಪರಿಗಣಿಸಿ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ವರ್ಷದ ಜನವರಿ 19ರಂದು ಒಟ್ಟು 111 ನಗರಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ಆರಂಭಿಸಲಾಗಿತ್ತು. ಸಾಂಸ್ಥಿಕ, ಸಾಮಾಜಿಕ, ಆರ್ಥಿಕ, ಭೌತಿಕ ಅಭಿವೃದ್ಧಿ ಪರಿಗಣಿಸಿ ನಗರಗಳಿಗೆ ರ‍್ಯಾಂಕಿಂಗ್ ನೀಡಲಾಗಿದೆ. ಪ್ರತಿ ನಗರಗಳನ್ನು ಒಟ್ಟು 15 ವರ್ಗಗಳ ಹಾಗೂ 78ನ ಮಾನದಂಡಗಳ ಅನುಸಾರ ಮೌಲ್ಯಮಾಪನ ಮಾಡಲಾಗಿದೆ.
ನಗರ ಆಡಳಿತ ಅಧಿಕಾರಿಗಳಿಗೆ ರಾಷ್ಟ್ರೀಯ ಓರಿಯಂಟೇಷನ್ ಕಾರ್ಯಾಗಾರ ನಡೆಸಲಾಗಿತ್ತು. ಇದರಲ್ಲಿ ಮೌಲ್ಯಮಾಪನದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸಚಿವಾಲಯದಿಂದ 33 ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಡೆಸಲಾಯಿತು. ನಗರಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ನೀಡಲು ಡಾಟಾ ಎಂಟ್ರಿ ಪೋರ್ಟಲ್ ರಚಿಸಲಾಗಿತ್ತು. 60,000 ಸ್ಥಳೀಯರ ಅಭಿ ಪ್ರಾಯ ಹೊಂದಿರುವ ಸುಮಾರು 10,000 ದಾಖಲೆಗಳನ್ನು ಪ್ರತಿ ನಗರಗಳು ಸಲ್ಲಿಸಿವೆ. ಅದರನ್ವಯ ರ‍್ಯಾಂಕಿಂಗ್ ನೀಡಲಾಗಿದೆ.
ಪುಣೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ನವಿ ಮುಂಬೈ ಮತ್ತು ಗ್ರೇಟರ್ ಮುಂಬೈ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದೆ. ನಂತರದ ಸ್ಥಾನವನ್ನು ತಿರುಪತಿ(4), ಚಂಡೀಗಢ(5), ಥಾಣೆ(6), ರಾಯ್ಪುರ(7), ಇಂದೋರ್(8), ವಿಜಯವಾಡ(9), ಭೋಪಾಲ್(10) ಪಡೆದಿವೆ. ದೆಹಲಿಗೆ 65ನೇ ಸ್ಥಾನ ಸಿಕ್ಕಿದರೆ, ಚೆನ್ನೈ 14ನೇ ಸ್ಥಾನ, ವಾರಾಣಸಿ 33ನೇ ಸ್ಥಾನ ಸಿಕ್ಕಿದೆ. ಪಶ್ಚಿಮ ಬಂಗಾಳದ ನಗರಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ.
ಈ ಪಟ್ಟಿಯಲ್ಲಿ ಕರ್ನಾಟಕದ 7 ನಗರಗಳು ಸ್ಥಾನವನ್ನು ಪಡೆದುಕೊಂಡಿವೆ. ಮಂಗಳೂರು(41), ಬೆಳಗಾವಿ (52), ಹುಬ್ಬಳ್ಳಿ- ಧಾರವಾಡ(57), ಬೆಂಗಳೂರು(58) ಶಿವಮೊಗ್ಗ(67), ತುಮಕೂರು(70) ದಾವಣಗೆರೆ(83)ನೇ ಸ್ಥಾನ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com