ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ ತೀವ್ರವಾಗಿರುವಂತೆಯೇ ರಾಜ್ಯದ ಒಂದಿಡೀ ಗ್ರಾಮ ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿರುವ ಘಟನೆ ನಡೆದಿದೆ.
ಮಳೆಯ ಆರ್ಭಟ ಮತ್ತು ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಕರ್ನಾಟಕದಲ್ಲಿ ದಿನಕಳೆದಂತೆ ಮಳೆರಾಯ ತನ್ನ ರೌದ್ರಾವತಾರವನ್ನು ತೋರಿಸುತ್ತಿದ್ದು, ಮಳೆ ಮತ್ತು ಪ್ರವಾಹದ ಅಬ್ಬರಕ್ಕೆ ರಾಜ್ಯದ ಒಂದಿಡೀ ಗ್ರಾಮ ನೀರಿನಲ್ಲಿ ಮುಳುಗಡೆಯಾಗಿದೆ. ಕಲ್ಲೂರು ಗ್ರಾಮಕ್ಕೆ ನುಗ್ಗಿದ ಪ್ರವಾಹದ ನೀರು ಇಡೀ ಗ್ರಾಮವನ್ನು ನಾಮವಶೇಷ ಮಾಡಿದೆ.
ಸುದ್ದಿಸಂಸ್ಥೆಯೊಂದು ಸೆರೆ ಹಿಡಿದಿರುವ ಗ್ರಾಮದ ಚಿತ್ರಗಳು ಕರ್ನಾಟಕ ಪ್ರವಾಹದ ಭೀಕರತೆಯನ್ನು ಪ್ರದರ್ಶನ ಮಾಡುತ್ತಿದ್ದು, ಗ್ರಾಮದಲ್ಲಿ ಜನಜೀವನ ವ್ಯವಸ್ಥೆ ಇತ್ತು ಎನ್ನುವುದಕ್ಕೆ ಯಾವುದೇ ರೀತಿಯ ಕುರುಹುಗಳೂ ಕೂಡ ಇಲ್ಲದಂತೆ ಪ್ರವಾಹ ಎಲ್ಲವನ್ನೂ ಆಪೋಶನ ತೆಗೆದುಕೊಂಡಿದೆ.
ಪ್ರಸ್ತುತ ಗ್ರಾಮದಲ್ಲಿ ನಿವಾಸಿಗಳ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ,. ಅಂತೆಯೇ ಸಾವು-ನೋವುಗಳ ಕುರಿತೂ ಮಾಹಿತಿ ಲಭ್ಯವಾಗಿಲ್ಲ.
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ
ಇನ್ನು ಪ್ರವಾಹ ಪೀಡಿತ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಹೆಚ್ಚುವರಿಯಾಗಿ ಸುಮಾರು 200ಕ್ಕೂ ಅಧಿಕ ಮಂದಿ ಸಿಬ್ಬಂದಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
Visuals of flood-hit Kallur village in #Karnataka. Most parts of the village have got submerged in the flood water. (17.08.18) pic.twitter.com/kf7peE4ImU