ಮಳೆಯಿಂದಾಗಿ ಕೊಡಗಿನ ಪರಿಸ್ಥಿತಿ ಹದಗೆಟ್ಟು, ರಕ್ಷಣಾ ಕಾರ್ಯಾಚರಣೆಯ ಪ್ರಾರಂಭವಾದ ದಿನದಿಂದಲೂ ಖುದ್ದಾಗಿ ಸ್ಥಳಕ್ಕೆ ತೆರಳಿ ನಿರಾಶ್ರಿತರ ಅಗತ್ಯತೆಗಳಿಗೆ ಸಂಸದ ಪ್ರತಾಪ್ ಸಿಂಹ ಸ್ಪಂದಿಸುತ್ತಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕೊಡಗು ಮಳೆಯಿಂದ ತತ್ತರಿಸಿದೆ ಸಂಸದ ಪ್ರತಾಪ್ ಸಿಂಹ ಎಲ್ಲಿ? ಎಂದು ಪ್ರಶ್ನಿಸಿದ್ದರು. ಆ.19 ರಂದು ಫೇಸ್ ಬುಕ್ ಲೈವ್ ನಲ್ಲಿ ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದ ಪ್ರತಾಪ್ ಸಿಂಹ, ಸಾಮಾಜಿಕ ಜಾಲತಾಣದಲ್ಲಿ ಸಂಸದರು ಎಲ್ಲಿ ಎಂದು ಪ್ರಶ್ನಿಸಿದವರಿಗೂ ಉತ್ತರ ನೀಡಿದ್ದರು.