ರಾಜ್ಯ

ಕೊಡಗು: ಕೇಂದ್ರದಿಂದ 2 ಸಾವಿರ ಕೋಟಿ ರೂ. ನೆರವು ಕೋರಲು ರಾಜ್ಯ ಸರ್ಕಾರ ಚಿಂತನೆ

ಕೊಡಗು: ಕೇಂದ್ರದಿಂದ 2 ಸಾವಿರ ಕೋಟಿ ರೂ. ನೆರವು ಕೋರಲು ರಾಜ್ಯ ಸರ್ಕಾರ ಚಿಂತನೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು:ಮಹಾಮಳೆ ಹಾಗೂ ಭೂ ಕುಸಿತದಿಂದ ಜರ್ಝರಿತಗೊಂಡಿರುವ ಕೊಡಗು  ಮರುನಿರ್ಮಾಣಕ್ಕೆ ಹಲವು ತಿಂಗಳುಗಳೇ ಬೇಕಾಗುತ್ತದೆ.

ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಕೊಡಗು ಜಿಲ್ಲೆಯಲ್ಲಿ  2.500 ಕೋಟಿ ಡಾಲರ್ ನಷ್ಟು  ನಷ್ಟ ಉಂಟಾಗಿದೆ ಎಂದು ಸರ್ಕಾರದ  ಆರಂಭಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ. ಭೂ ಕುಸಿತದಿಂದಾಗಿ 16 ಜನರು ಸಾವನ್ನಪ್ಪಿದ್ದು,  2, 200 ಮನೆಗಳು, ರಸ್ತೆಗಳು, ಹಾಗೂ ಬೃಹತ್ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.

 ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಕೊಡಗಿನಲ್ಲಿಯೇ ಇದ್ದು, ಪರಿಹಾರ ಮತ್ತು ಪುನರ್ವಸತಿಯ ಮೇಲ್ತುಸುವರಿ ನಡೆಸುತ್ತಿದ್ದು,  ಕೊಡಗಿನ ಮರು ನಿರ್ಮಾಣಕ್ಕೆ ಕೇಂದ್ರಸರ್ಕಾರದಿಂದ 2 ಸಾವಿರ ಕೋಟಿ ಡಾಲರ್  ನೆರವು ಪಡೆಯುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

 ಮನೆಗಳು, ರಾಷ್ಟ್ರೀಯ ಹೆದ್ದಾರಿ  ಮತ್ತಿತರ ಹಾಳಾಗಿರುವ ರಸ್ತೆಗಳ ಮೌಲ್ಯ 1 ಸಾವಿರ ಕೋಟಿ ಡಾಲರ್ ಆಗಿದ್ದು,  ಬೆಳೆ ನಷ್ಟ ಮತ್ತಿತರ ಎಲ್ಲಾ ಅಂಶಗಳು ಸೇರಿದಂತೆ 2 ಸಾವಿರದ 500 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಸಮಗ್ರ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಂಪುಟ ಸಭೆಯ ನಂತರ ಕೇಂದ್ರಕ್ಕೆ ಆರ್ಥಿಕ ನೆರವಿಗೆ ಮನವಿ ಮಾಡಲಾಗುವುದು,  ಹಾನಿಯಾದ ವರದಿ ಅಂತಿಮಗೊಂಡ ಬಳಿಕ ಕೇಂದ್ರಕ್ಕೆ ಮತ್ತೊಂದು ವರದಿ ಸಲ್ಲಿಸಲಾಗುವುದು. ಪ್ರಸ್ತುತ 5, 041  ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ತಾತ್ಕಾಲಿಕವಾಗಿ 10 ಸಾವಿರ ಜನರಿಗೆ ಅಲ್ಯೂಮೀನಿಯಂ ಶೀಟ್ ನಿಂದ ಮನೆ ನಿರ್ಮಾಣ ಮಾಡಲಾಗುತ್ತಿದೆ. ಸ್ವಂತವಾಗಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ  ಸರ್ಕಾರದಿಂದ 5 ಲಕ್ಷ ರೂಪಾಯಿ ನೀಡಲಾಗುವುದು  ಎಂದು ಸಾರಾ ಮಹೇಶ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.