ಬೆಂಗಳೂರು ಪೊಲೀಸ್ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್ ಗಳು

ನಗರದಲ್ಲಿರುವ ಪೊಲೀಸ್ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಫ್ಲಾಟ್ ಗಳನ್ನು ನೀಡಲು ಬೆಂಗಳೂರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿರುವ ಪೊಲೀಸ್ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಫ್ಲಾಟ್ ಗಳನ್ನು ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ಕುರಿತು ಗೃಹ ಇಲಾಖೆ ಮತ್ತು ಬಿಡಿಎ ಮಧ್ಯೆ ಮಾತುಕತೆ ನಡೆಯುತ್ತಿದೆ.

ನಗರದಲ್ಲಿರುವ ಅನೇಕ ಪೊಲೀಸ್ ಸಿಬ್ಬಂದಿಗೆ ವಸತಿಗೆ ಸೂಕ್ತ ಸ್ಥಳದಲ್ಲಿ ಮನೆ ನೀಡಲು ಗೃಹ ಇಲಾಖೆಗೆ ಕಷ್ಟವಾಗುತ್ತಿರುವುದರಿಂದ ಬಿಡಿಎಯಿಂದ ರಿಯಾಯಿತಿ ದರದಲ್ಲಿ ಫ್ಲಾಟ್ ಗಳನ್ನು ಕೇಳುತ್ತಿದೆ ಎನ್ನಲಾಗುತ್ತಿದೆ.

ಆದ್ಯತೆ ಮೇರೆಗೆ ಬಿಡಿಎ ಫ್ಲಾಟ್ ಗಳನ್ನು ನೀಡಲು ಗೃಹ ಇಲಾಖೆ ಅಧಿಕಾರಿಗಳು ಬಿಡಿಎ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಒಂದೇ ಬಾರಿಗೆ ಹಲವು ಫ್ಲಾಟ್ ಗಳನ್ನು ಬುಕ್ಕಿಂಗ್ ಮಾಡಿಕೊಳ್ಳುವುದರಿಂದ ರಿಯಾಯಿತಿ ದರದಲ್ಲಿ ನೀಡುವ ಸಾಧ್ಯತೆಯಿದೆ.
ಬಿಡಿಎಯು ವಲಗೇರಹಳ್ಳಿ, ಆಲೂರು, ಕನ್ಮಿನಿಕೆ, ಕೊಮಘಟ್ಟ ಮತ್ತು ದೊಡ್ಡಬಾನಹಳ್ಳಿ ಗಳಲ್ಲಿ ನಿರ್ಮಿಸಿರುವ ಫ್ಲಾಟ್ ಗಳನ್ನು ಬಿಡಿಎ ಮಾರಾಟ ಮಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com