ಕೇಂದ್ರ ಸರ್ಕಾರವನ್ನು ಕೀಳಾಗಿ ನೋಡಿಲ್ಲ, ಆದರೆ ನಿರ್ಮಲಾ ಸಚಿವರಿಗೆ ಗೌರವ ತೋರಿಸಬೇಕಿತ್ತು: ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರವನ್ನು ನಾವು ಕೀಳಾಗಿ ನೋಡಿಲ್ಲ. ಆದರೆ ಕೇಂದ್ರ ಸಚಿವರು ರಾಜ್ಯ ಸಚಿವರಿಗೆ ಗೌರವ ತೋರಿಸಬೇಕಿತ್ತು ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಕೇಂದ್ರ ಸರ್ಕಾರವನ್ನು ನಾವು ಕೀಳಾಗಿ ನೋಡಿಲ್ಲ. ಆದರೆ ಕೇಂದ್ರ ಸಚಿವರು ರಾಜ್ಯ ಸಚಿವರಿಗೆ ಗೌರವ ತೋರಿಸಬೇಕಿತ್ತು ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಸಾರಾ ಮಹೇಶ್ ನಡುವಿನ ತಿಕ್ಕಾಟಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ದುರಾದೃಷ್ಟಕರ, ಆದರೆ ನಾವು ಎಂದಿಗೂ ಕೇಂದ್ರ ಸರ್ಕಾರವನ್ನು ಕೀಳಾಗಿ ನೋಡಿಲ್ಲ. ಆದರೂ ಕೇಂದ್ರ ಸಚಿವರು ರಾಜ್ಯ ಸಚಿವರ ಸಾರಾ ಮಹೇಶ್ ಅವರಿಗೆ ಗೌರವ ನೀಡಬೇಕಿತ್ತು ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಕೊಡಗು ಪ್ರವಾಹ ಪೀಡಿತರ ಭೇಟಿ ಮತ್ತು ಅಧಿಕಾರಿಗಳ ಸಭೆ  ಬಳಿಕ ಕರೆಯಲಾಗಿದ್ದ ಸುದ್ದಿಗೋಷ್ಠಿಗೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಸಚಿವ ಸಾರಾ ಮಹೇಶ್ ನಡುವೆ ವಾಗ್ವಾದ ನಡೆದಿತ್ತು. 'ಕೇಂದ್ರ ಸಚಿವೆಯಾದ ನಾನು ಜಿಲ್ಲಾ ಉಸ್ತುವಾರಿ ಸಚಿವರನ್ನು ಅನುಸರಿಸುವುದೇ, ಮೊದಲು ನೀವು ಪ್ರತಿನಿಮಿಷದ, ಮಿನಿಟ್ ಟು ಮಿನಿಟ್ ಕಾರ್ಯಕ್ರಮವೇನಿದೆ ಅದರ ಪಟ್ಟಿಯನ್ನು ಮಾಡಬೇಕು, ಬೆಳಗ್ಗೆಯಿಂದ ನಾನು ಪ್ರತಿ ನಿಮಿಷವನ್ನೂ ಫಾಲೋ ಮಾಡ್ತಿದ್ದೇನೆ. ನೀವೇ ನಿಗದಿ ಮಾಡಿದ ವೇಳಾಪಟ್ಟಿಯಂತೆ ಹೋಗುತ್ತಿದ್ದೇನೆ. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತನಾಡಿ ನೀವೇ ಬಗೆಹರಿಸಿಕೊಳ್ಳಿ, ನನಗೆ ಮುಜುಗರ ಉಂಟು ಮಾಡಬೇಡಿ ಎಂದು ಸಚಿವ ಸಾ ರಾ ಮಹೇಶ್ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ನಿರ್ಮಲಾ ಸೀತಾರಾಮನ್​ ಮಾಧ್ಯಮದ ಮುಂದೆಯೇ ಗುಡುಗಿದ್ದರು.
ಅಲ್ಲದೆ ನಿರ್ಮಲಾ ಸೀತಾರಾಮನ್​ ಮತ್ತು ಸಾ.ರಾ. ಮಹೇಶ್​ ನಡುವೆ ಭಿನ್ನಾಭಿಪ್ರಾಯ ಆರಂಭವಾದ ತಕ್ಷಣ ಪತ್ರಕರ್ತರು ಮೈಕ್​ನಲ್ಲಿ ಹೇಳಿ ಎಂದು ಕೇಳಿದರು. ಇದಕ್ಕೆ ಮತ್ತಷ್ಟು ಸಿಟ್ಟಾದ ನಿರ್ಮಲಾ ಸೀತಾರಾಮನ್​, ಆಯ್ತು ರೆಕಾರ್ಡ್​ ಮಾಡಿಕೊಳ್ಳಿ, ಮೈಕ್​ ಹೇಗಿದ್ದರೂ ಚಾಲ್ತಿಯಲ್ಲಿದೆ, ನಾನೇನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು. ಇದು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಕಾಂಗ್ರೆಸ್ ಮತ್ತು ಬಿಜೆಪಿ ವಾಕ್ಸಮರಕ್ಕೂ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com