ಭಿನ್ನತೆ, ಪಕ್ಷಬೇಧ ಮರೆತು ಸರ್ವಪಕ್ಷ ನಾಯಕರಿಂದ ವಾಜಪೇಯಿ ಸ್ಮರಣೆ

ಇತ್ತೀಚೆಗಷ್ಟೇ ಅಗಲಿದ ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನ, ಆಡಳಿ, ಕಾರ್ಯವೈಖರಿ, ಅಧಿಕಾರಾವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ, ರಾಜಕೀಯ ವೈರಿಗಳೊಂದಿಗೆ ಬೆಳೆಸಿದ...
ವಾಜಪೇಯಿ
ವಾಜಪೇಯಿ
ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನ, ಆಡಳಿ, ಕಾರ್ಯವೈಖರಿ, ಅಧಿಕಾರಾವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ, ರಾಜಕೀಯ ವೈರಿಗಳೊಂದಿಗೆ ಬೆಳೆಸಿದ ಸ್ನೇಹದ ಸನ್ನಿವೇಶಗಳನ್ನು ಪಕ್ಷಬೇಧ, ಭಿನ್ನತೆಗಳನ್ನು ಮರೆತ ವಿವಿಧ ರಾಜಕೀಯ ಮುಖಂಡರು ಹಾಗೂ ಸ್ವಾಮೀಜಿಗಳು ಗುಣಗಾನ ಮಾಡಿದರು. 
ನಗರದ ಪುರಭವನದಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿದ್ದ ರಾಜಕೀಯ ನಾಯಕರು ಹಾಗೂ ಧಾರ್ಮಿಕ ಮುಖಂಡರು ನುಡಿ ನಮನ ಸಲ್ಲಿಸಿದರು. 
ವಾಜಪೇಯಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಲ್ಲದೆ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಕೂಡ ಶ್ರದ್ಧಾಂಜಲಿ ಸಲ್ಲಿಸಿದರು. 

ಅನಾರೋಗ್ಯ ಸಮಸ್ಯೆಯಿಂದಾಗಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಪೇಜಾವರ ಶ್ರೀ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮದರ ಗುರು ಪೀಠದ ಮದರ ಚೆನ್ನಯ್ಯ ಸ್ವಾಮೀ ಮತ್ತು ಭಲ್ಕಿ ಮಠಾಧೀಶ ಸ್ವಾಮೀಜಿಗಳು ಹಾಜರಿದ್ದರು. 

ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಭಿನ್ನತೆಗಳನ್ನು ಬದಿಕೊತ್ತಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ವಾಜಪೇಯಿಯವರಿಗೆ ಅಂತಿಮ ಗೌರವ ಸಲ್ಲಿಸಿದರು. ಇದಲ್ಲದೆ ಕಾರ್ಯಕ್ರಮದಲ್ಲಿ ಹಾಜರಿದ್ದ ಆರ್'ಎಸ್ಎಸ್ ಜಂಟಿ ಕಾರ್ಯದರ್ಶಿ ಮುಕುಂದ್ ಅವರೊಂದಿಗೆ ನೂತನವಾಗಿ ಆಯ್ಕೆಯಾಗಿರುವ ಸಚಿವರು ವೇದಿಕೆ ಹಂಚಿಕೊಂಡಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಶರೀಫ್ ಮತ್ತು ಜೆಡಿಎಸ್ ನಾಯಕ ಪಿಜಿಆರ್ ಸಿಂದಿಯಾ ಕೂಡ ವಾಜಪೇಯಿಯವರಿಗೆ ನಮನ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com