ಬೆಂಗಳೂರು ವಿವಿ ಪ್ರೊಫೆಸರ್ ಗಳ ಆಂತರಿಕ ಕಾದಾಟ: ವಿದ್ಯಾರ್ಥಿಗಳ ಮಾಸ್ ಫೇಲ್!

ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಇಬ್ಬರ ಹಿರಿಯ ಪ್ರೊಫೆಸರ್ ಗಳ ನಡುವಿನ ಆಂತರಿ ಕಲಹದಿಂದ ಒಂದು ಪತ್ರಿಕೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ...
ಬೆಂಗಳೂರು ವಿವಿ
ಬೆಂಗಳೂರು ವಿವಿ
ಬೆಂಗಳೂರು: ಬೆಂಗಳೂರು ವಿವಿ  ಅರ್ಥಶಾಸ್ತ್ರ ವಿಭಾಗದ ಇಬ್ಬರ  ಹಿರಿಯ ಪ್ರೊಫೆಸರ್ ಗಳ ನಡುವಿನ ಆಂತರಿ ಕಲಹದಿಂದ ಒಂದು ಪತ್ರಿಕೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಫೇಲ್ ಆಗುವುದಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ಎಂ.ಕಾಂ ಮೊದಲ ಸೆಮಿಸ್ಟರ್ ನಲ್ಲಿ  3ಸಾವಿರ ವಿದ್ಯಾರ್ಥಿಗಳ ಪೈಕಿ 1,189 ಮಂದಿ ಫೇಲ್ ಆಗಿದ್ದಾರೆ. ಇದಕ್ಕೆ ಕಾರಣ ಪ್ರೊಫೆಸರ್ ಗಳ  ನಡುವಿನ ವೈಮನಸ್ಯ ಎಂದು ವಿವಿಯ ಗುಪ್ತಚರ ಇಲಾಖೆ ವರದಿ ದೃಢಪಡಿಸಿದೆ.
ಇಬ್ಬರು ಪ್ರೊಫೆಸರ್ ಗಳ ನಡುವಿನ ಆಂತರಿಕ ಕಲಹದಿಂದಾಗಿ ತಾವು ಪರೀಕ್ಷೆಯಲ್ಲಿ ಫೇಲ್ ಆಗಬೇಕಾಯಿತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದರಿಂದಾಗಿ ವಿವಿ ರಿಜಿಸ್ಟಾರ್ ವಿವಿಯ ಗುಪ್ತಚರ ಇಲಾಖೆಗೆ ವರದಿ ನೀಡುವಂತೆ ಸೂಚಿಸಿತ್ತು.
ವರದಿ ಹಿನ್ನೆಲೆಯಲ್ಲಿ ಇಬ್ಬರು ಪ್ರೊಫೆಸರ್ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು  ವಿವಿ ಸಮಿತಿ ರಚಿಸಲು ಚಿಂತಿಸುತ್ತಿದೆ, ಈ ಬಗ್ಗೆ ಕಾಮರ್ಸ್ ವಿಭಾಗದ ಮಾಜಿ ಡೀನ್ ಹಾಗೂ ಪ್ರೊಫೆಸರ್  ಮುನಿರಾಜು ಅವರನ್ನು ಸಂಪರ್ಕಿಸಿದಾಗ , ಇಲಾಖೆಯಲ್ಲಿ ಯಾವ ರೀತಿಯ ಆಂತರಿಕ ಕಲಹಗಳಿಲ್ಲ ಎಂದು ಹೇಳಿದ್ದಾರೆ.ಯಾರು ಪರೀಕ್ಷೆಯಲ್ಲಿ ಸರಿಯಾಗಿ ಬರೆದಿಲ್ಲವೋ ಅವರು ಫೇಲ್ ಆಗಿದ್ದಾರೆ, ವಿವಿಯು ತಜ್ಞರ ತಂಡ ರಚಿಸಿ ಎಲ್ಲಾ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯ ಮಾಪನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ,.
ಸದ್ಯ ಡೀನ್ ಆಗಿರುವ ಮುನಿರಾಯಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಸಿಗಲಿಲ್ಲ.
ಇತ್ತೀಚೆಗಷ್ಟೆ ಎಂಕಾಂ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಲಾಗಿತ್ತು, ಅದರಲ್ಲಿ ಶೇ,. 50 ರಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದರು.  ಗುಪ್ತಚರ ವರದಿ ನಂತರ ವಿವಿ ಮರು ಮೌಲ್ಯಮಾಪನಕ್ಕೆ ಮುಂದಾಗಿದ್ದು ಇನ್ನು ಒಂದು ಅಥವಾ ಎರಡೋ ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ರಿಜಿಸ್ಚಾರ್ ಪ್ರೊಫೆಸರ್ ಶಿವರಾಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com