ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ,ಎಂ ವಿಜಯ್ ಭಾಸ್ಕರ್ ಕಂದಾಯ, ಬಿಡಿಎ, ಅರಣ್ಯ ಮತ್ತು ಬಿಎಂ ಆರ್ ಸಿಎಂ ಉನ್ನತ ಅಧಿಕಾರಗಳ ಜೊತೆ ಸಭೆ ನಡೆಸಿದರು. 72.1 ಕಿಮೀ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯಕ್ಕೆ ಸುಮಾರು 32 ಸಾವಿರ ಕೋಟಿ ರು ಹಣ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.ಇದಕ್ಕೆ 13,26 ಲಕ್ಷ ಚದರ ಕೀಮೀ ಭೂಮಿ ಬೇಕಾಗಿದ್ದು, ಇದರಲ್ಲಿ ಈಗಾಗಲೇ 8.6 ಲಕ್ಷ ಚದರ ಕಿಮೀ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪರಿಹಾರವಾಗಿ ಜಾಗದ ಮಾಲಿಕರಿಗೆ 6,293 ಕೋಟಿ ರು ಹಣ ನೀಡಲಾಗಿದೆ.