ರಾಜ್ಯ

ಮೈಸೂರು: ವಿಷ ಪ್ರಸಾದ ದುರಂತ ಪ್ರಕರಣ: ಆರೋಗ್ಯ ಸಚಿವರ 'ಉಡಾಫೆ' ಸಮರ್ಥನೆ

ಮೈಸೂರು: ವಿಷ ಪ್ರಸಾದ ದುರಂತ ಪ್ರಕರಣ: ಆರೋಗ್ಯ ಸಚಿವರ 'ಉಡಾಫೆ' ಸಮರ್ಥನೆ
ಆರೋಗ್ಯ ಸಚಿವ ಶಿವಾನಂದ ಪಾಟೀಲ್
Published On :

ಮೈಸೂರು: ಚಾಮರಾಜನಗರ ಜಿಲ್ಲೆ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರೂ  ಆರೋಗ್ಯ ಸಚಿವ ಶಿವಾನಂದ ಪಾಟೀಲ್  ಅವರಿಗೆ ಗೊತ್ತೇ ಇರಲಿಲ್ಲವಂತೆ. ನಿನ್ನೆ ಸಂಜೆ ಗೊತ್ತಾಯಿತ್ತಂತೆ.

ಘಟನೆ ಸಂಭವಿಸಿ 44 ಗಂಟೆಗಳ ಬಳಿಕ ಮೈಸೂರಿನಲ್ಲಿ ಇಂದು ಪ್ರತ್ಯಕ್ಷಗೊಂಡ ಸಚಿವ ಶಿವಾನಂದ ಪಾಟೀಲ್ , ವಿಜಯಪುರದಿಂದ ಬರುವುದಕ್ಕೆ ತಡವಾಯಿತು ಎಂದು ಹೇಳುವ ಮೂಲಕ  ತಮ್ಮ ಕರ್ತವ್ಯನಿಷ್ಠೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಂದ ನಂತರ ನಾನೇಕೆ ಎಂದು ಹೇಳಿಕೊಂಡು ವಿಜಯಪುರದಲ್ಲಿಯೇ ಇದ್ದಾರಂತೆ. ಹೀಗಂತಾ ಅವರೇ ಹೇಳಿದ್ದಾರೆ.  ಸಿಎಂ ಕುಮಾರಸ್ವಾಮಿ ಅವರೇ ಬಂದು ಹೋಗಿದ್ದಾರೆ. ನಾನು ಬಂದು ಇನ್ನೇನು ಆಗಬೇಕು ಅಂತಾ ಬರಲಿಲ್ಲ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ.

ಮೃತಪಟ್ಟ ಕುಟುಂಬ ಸದಸ್ಯರಿಗೆ  ಸರ್ಕಾರದಿಂದ 5 ಲಕ್ಷ ಹಾಗೂ ಕೆಪಿಸಿಸಿ ವತಿಯಿಂದ 1 ಲಕ್ಷ ರೂಪಾಯಿ  ಪರಿಹಾರ ನೀಡಲಾಗಿದ್ದು, ಹೆಚ್ಚಿನ ಅಗತ್ಯದ ನೆರವಿದ್ದರೆ ಸರ್ಕಾರ ಸ್ಪಂದಿಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ.

ಅಸ್ವಸ್ಥಗೊಂಡವರ ಪೈಕಿ 6-7 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 400 ಆಂಬ್ಯುಲೆನ್ಸ್ ಗಳನ್ನು ಖರೀದಿ ಮಾಡಲಾಗುವುದು, ವೈದ್ಯರ ಕೊರತೆ ನೀಗಿಸಲು 360 ವೈದ್ಯರನ್ನು ನೇಮಿಸಿಕೊಳ್ಳಲಾಗುವುದು ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.