ಸಂವಿಧಾನ ದಿನಾಚರಣೆಯಂದು ಮಂತ್ರಮಾಂಗಲ್ಯದ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ: ಸರಳತೆಗೆ ಮೆಚ್ಚುಗೆಯ ಮಹಾಪೂರ

ರಾಮನಗರ: ಆಡಂಭರದ ಮದುವೆ, ಆರತಕ್ಷತೆಗಳು ನಡೆಯುವುದೇ ಹೆಚ್ಚಾಗಿರುವ ಕಲಾಘಟ್ಟದಲ್ಲಿ ರಾಜ್ಯದ ಶಾಸಕರೊಬ್ಬರು ಸರಳ, ಮಾದರಿಯ ವಿವಾಹವಾಗಿದ್ದಾರೆ.
ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಮಂತ್ರಮಾಂಗಲ್ಯದ ಮೂಲಕ ರಾಮನಗರದ ಜಾನಪದ ಲೋಕದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಮತ್ತು ಮಂಡ್ಯ ಮೂಲದ ವೈದ್ಯೆ ಡಾ. ಶ್ರೀನಿಧಿ ಅವರು ಸರಳವಾಗಿ ವಿವಾಹವಾದರು.
ಬೆಂಗಳೂರು–ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಜಾನಪದ ಲೋಕದಲ್ಲಿ ಆಯೋಜಿಸಲಾಗಿದ್ದ ಸರಳ ವಿವಾಹ ಕಾರ್ಯಕ್ರದಲ್ಲಿ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ವಿವಾಹ ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.
ಜಾನಪದ ಲೋಕದಲ್ಲಿ ವಿವಾಹದ ಬಳಿಕ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಮತ್ತು ಕೆ.ಆರ್. ಪೇಟೆ ಮೂಲದ ಡಾ. ಶ್ರೀನಿಧಿ ಅವರ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮ ಕಳೆದ ನವೆಂಬರ್ 2ರಂದು ಮಂಡ್ಯದಲ್ಲಿ ನಡೆದಿತ್ತು.
ಶಾಸಕರಾಗಿದ್ದರೂ ಸರಳ ವಿವಾಹವಾಗಿರುವ ಧ್ರುವನಾರಾಯಣ ಅವರ ನಡೆಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



