ಎಸ್'ಸಿ/ಎಸ್'ಟಿ ಸಿಬ್ಬಂದಿಗಳಿಗೆ ಮೊದಲು ಉತ್ತೇಜನ ನೀಡಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ

ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಎಸ್'ಸಿ, ಎಸ್'ಟಿ ಸರ್ಕಾರಿ ನೌಕರರ ಹಿತ ಕಾಪಾಡಲು ಜಾರಿಗೆ ತಂದಿರುವ ಕಾನೂನು ಅನುಷ್ಠಾನಗೊಳಿಸುವ ಕುರಿತು ಇದೀಗ ತೀವ್ರ ಪರ...
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಎಸ್'ಸಿ, ಎಸ್'ಟಿ ಸರ್ಕಾರಿ ನೌಕರರ ಹಿತ ಕಾಪಾಡಲು ಜಾರಿಗೆ ತಂದಿರುವ ಕಾನೂನು ಅನುಷ್ಠಾನಗೊಳಿಸುವ ಕುರಿತು ಇದೀಗ ತೀವ್ರ ಪರ ಹಾಗೂ ವಿರೋಧ ಚರ್ಚೆಗಳು ಆರಂಭಗೊಂಡಿವೆ. 
ಸುಪ್ರೀಂಕೋರ್ಟ್'ನಲ್ಲಿ ಪ್ರಕರಣ ಇತ್ಯರ್ಥಗೊಳ್ಳಲು ಹಾಗೂ ಸಾವಿರಾರು ನೌಕರರ ಹಿತ ಕಾಯಲು ಕೂಡಲೇ ಕಾನೂನು ಅನುಷ್ಠಾನಗೊಳಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರು ಆಗ್ರಹಿಸಿದ್ದಾರೆ. 
ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆಯವರು, ಮೀಸಲು ಸೌಲಭ್ಯಕ್ಕೆ ಅರ್ಹರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪ್ರವರ್ಗ, ಒಬಿಸಿ ಅಭ್ಯರ್ಥಿಗಳಿಗೆ ಮೆರಿಟ್ ಮೇಲೆ ಜನರಲ್ ಪ್ರವರ್ಗದಲ್ಲೂ ಸಿಗುವ ಅವಕಾಶ ಕಸಿದುಕೊಳ್ಳುವ ತೀರ್ಮಾನ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. 
ಸುಪ್ರೀಂಕೋರ್ಟ್ ಆದೇಶವನ್ನು ಸರಿಯಾಗಿ ಆರ್ಥ ಮಾಡಿಕೊಳ್ಳದ ಅನೇಕ ಇಲಾಖೆಗಳು ದೋಷಪೂರಿತ ಹಿರಿತನವನ್ನು ಪಟ್ಟಿ ಮಾಡಿದೆ. ಅಲ್ಲದೆ, ಪರಿಶಿಷ್ಟ ಜಾತಿ/ ಪರಿಶಿಷ್ಠ ಪಂಗಡಗಳಿಗೆ ಸೇರಿದ ಸಿಬ್ಬಂದಿಗಳನ್ನು ಹುದ್ದೆಯಿಂದ ಕೆಳಗಿಳಿಸುತ್ತಿವೆ. ಡಿ.6 2018ರಲ್ಲಿ ಡಿಪಿಎಆರ್ ಸುತ್ತೋಲೆಯೊಂದನ್ನು ಹೊರಡಿಸಿದ್ದು. ಸುತ್ತೋಲೆಯ ಸೂಚನೆಯಂತೆ ಎಸ್'ಸಿ/ಎಸ್'ಟಿ ನಿವೃತ್ತ ಸಿಬ್ಬಂದಿಗಳ ಆರ್ಥಿಕ ಸೌಲಭ್ಯಗಳಿಗೆ ಕತ್ತರಿ ಹಾಕಲಾಗಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಎಲ್ಲಾ ಇಲಾಖೆಗಳ ಬಡ್ತಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆಂದು ತಿಳಿದಿಬಂದಿದೆ. 
ಈ ನಡುವೆ ಕಾನೂನು ಅನುಷ್ಠಾನಕ್ಕೆ ತರುವ ಸಂಬಂಧ ಮುಂದಿನ 2 ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com