ಈ ವರ್ಷವೂ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಇಲ್ಲ

ಘಟಿಕೋತ್ಸವದಲ್ಲಿ ಸತತ ಮೂರನೇ ವರ್ಷ ಬೆಂಗಳೂರು ವಿಶ್ವವಿದ್ಯಾಲಯ ...
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು: ಘಟಿಕೋತ್ಸವದಲ್ಲಿ ಸತತ ಮೂರನೇ ವರ್ಷ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿಲ್ಲ. 
ವಿಶ್ವವಿದ್ಯಾಲಯ ಸಲ್ಲಿಸಿದ ಪಟ್ಟಿಯನ್ನು ಗವರ್ನರ್ ಹಾಗೂ ಚಾನ್ಸೆಲರ್ ವಜುಬಾಯಿ ವಾಲಾ ಅನುಮೋದನೆ ನೀಡಲು ನಿರಾಕರಿಸಿದ್ದಾರೆ. ಅವಧಿಯೊಳಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಬೇಕಾದವರ ಹೆಸರುಗಳನ್ನು ಸಲ್ಲಿಸಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.
2016ರಲ್ಲಿ ರಾಜ್ಯಪಾಲರು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ವಿಶ್ವವಿದ್ಯಾಲಯ ಘಟಿಕೋತ್ಸವಕ್ಕೆ 45 ದಿನಗಳ ಮುಂಚೆ ಗೌರವ ಡಾಕ್ಟರೇಟ್ ನೀಡಬೇಕಾದ ವ್ಯಕ್ತಿಗಳ ಹೆಸರುಗಳನ್ನು ಸಲ್ಲಿಸಬೇಕು. ಬೆಂಗಳೂರು ವಿಶ್ವವಿದ್ಯಾಲಯದ 53ನೇ ವಾರ್ಷಿಕ ಘಟಿಕೋತ್ಸವ ನಾಡಿದ್ದು ಗುರುವಾರ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com