ಬೆಂಗಳೂರು: ಬಹುಕೋಟಿ ರೂ. ವಂಚನೆಯ ಆರೋಪ ಎದುರಿಸುತ್ತಿದ್ದ ವಿನಿವಿಂಕ್ ಸಂಸ್ಥೆಯ ರೂವಾರಿ ಶ್ರೀನಿವಾಸ ಶಾಸ್ತ್ರಿಯನ್ನು ರಾಯಚೂರು ನಗರದ ಬಜಾರ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ
2005ರಲ್ಲಿ ರಾಯಚೂರು ನಗರದಲ್ಲಿ 1,55 ಕೋಟಿ ವಂಚನೆ ನಡೆಸಿದ್ದ ಶಾಸ್ತ್ರಿಯನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ/
ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಾಸ್ತ್ರಿ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಮಾಹಿತಿ ಪಡೆದ ರಾಯಚೂರಿನ ಬಜಾರ್ ಪೋಲೀಸರು ಬೆಂಗಳೂರಿಗೆ ಆಗಮಿಸಿ ಬಂಧಿಸಿದರು.
ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದಿದ್ದ ಶಾಸ್ತ್ರಿ ನಾಲ್ಕು ನೂರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದ.