

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2018-19 ನೇ ಸಾಲಿನ ಬಜೆಟ್ ನ್ನು ಮಂಡಿಸಲಾಗಿದೆ.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಜೆಡಿಎಸ್ ಪಕ್ಷದ ಮಹಾದೇವ್ ಅವರು ಇಂದು ಬಜೆಟ್ ಮಂಡಿಸಿದರು.
9,326.87 ಕೋಟಿ ರೂ. ಗಾತ್ರದ ಬಜೆಟ್ ಇದಾಗಿದ್ದು,150 ಕಿಲೋ ಮೀಟರ್ ಉದ್ದದ ರಸ್ತೆ ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಲಾಗಿದೆ.ಕೆರೆಗಳ ನಿರ್ವಹಣೆಗೆ 10 ಕೋಟಿ, ಶಾಲಾ, ಕಾಲೇಜುಗಳ ಕುಡಿಯುವ ನೀರಿಗಾಗಿ 5 ಕೋಟಿ, ಶಿಕ್ಷಣಕ್ಕೆ 5 ಕೋಟಿ ರೂ. ಮೀಸಲಿರಿಸಲಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಬಡವರು, ಮಧ್ಯಮ ವರ್ಗದವರು ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.ಕಲ್ಯಾಣ ಕಾರ್ಯಕ್ರಮಗಳು ಮತ್ತು ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಫ್ರೀಜರ್ ಒಳಗೊಂಡಿರುವ ನೂತನ ಶೈಲಿಯ ಶವಸಾಗಿಸುವ ವಾಹನ ಖರೀದಿಸಲು ಉದ್ದೇಶಿಸಲಾಗಿದ್ದು,ಇದಕ್ಕಾಗಿ 1.5 ಕೋಟಿ ರೂ.ಮೀಸಲಿರಿಸಲಾಗಿದೆ .ತುರ್ತು ಚಿಕಿತ್ಸಾ ಸಂಬಂಧವಾಗಿ ಮೂರು ಹೊಸ ಆಂಬ್ಯುಲೆನ್ಸ್ ವಾಹನ ಖರೀದಿಸಲು 1 ಕೋಟಿ ರೂ. ಮೀಸಲಿರಿಸಲಾಗಿದೆ.
ಆದಾಯದ ಮೂಲ : 3317 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಜಾಹೀರಾತು ತೆರಿಗೆಯಿಂದ 75 ಕೋಟಿ ರೂ.ಸುಧಾರಣಾ ಶುಲ್ಕದಿಂದ 300 ಕೋಟಿ ರೂ. ತೆರಿಗೆ ಸಂಗ್ರಹದ ಉದ್ದೇಶ ಹೊಂದಲಾಗಿದೆ.
ಸೇವಾ ಶುಲ್ಕದಿಂದ 60 ಕೋಟಿ ರೂ. ಮಳಿಗೆಗಳಿಂದ 90 ಕೋಟಿ ರೂ. ವ್ಯಾಪಾರ ಪರವಾನಗಿಯಿಂದ 57 ಕೋಟಿ ರೂ.ಒಎಫ್ಎಸ್ನಿಂದ 200 ಕೋಟಿ ರೂ.ಮೊಬೈಲ್ ಟವರ್ನಿಂದ 50 ಕೋಟಿ ರೂನಗರ ಯೋಜನೆ ವಿಭಾಗದಿಂದ 768 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ.