ಪೋಸ್ಕೋ ಕಾಯ್ದೆ ಅಡಿಯಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ತಿಂಗಳು ನ್ಯಾಯಾಲಯವು ವಿಚಾರಣೆಗೊಳಪಡಿಸುವ ಸಾಮಾನ್ಯ ಪ್ರಕರಣಗಳ ಸಂಖ್ಯೆಗಿಂತ ಅರ್ಧದಷ್ಟೂ ಇಲ್ಲ. ಕಾನೂನು ಇಲಾಖೆಯಿಂದ ನೀಡಲ್ಪಟ್ಟ ಅಂಕಿಅಂಶಗಳ ಪ್ರಕಾರ, ಮಕ್ಕಳ ವಿರುದ್ಧದ ಅಪರಾಧಗಳು ನಗರದ ಒಂದಿಲ್ಲೊಂದು ಭಾಗದಲ್ಲಿ ಪ್ರತಿ ದಿನವೂ ದಾಖಲಾಗುತ್ತವೆ. ಆಗಸ್ಟ್ 2017 ರಿಂದ ನವೆಂಬರ್ 2017 ರವರೆಗೆ 109 ಪ್ರಕರಣಗಳು ದಾಖಲಾಗಿದೆ. ಆದಾಗ್ಯೂ, ಅದೇ ಅವಧಿಯಲ್ಲಿ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ತೀರ್ಪು ಬಂದಿರುವ ಪ್ರಕರಣಗಳ ಸಂಖ್ಯೆ ಕೇವಲ 45 ಮಾತ್ರ.