ರಾಜ್ಯ

ಇನ್ನು 4 ವಾರದೊಳಗೆ ಖಾತಾ ಅರ್ಜಿಯಲ್ಲಿ ಆನ್ ಲೈನ್ ನಲ್ಲಿ: ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ

ಇನ್ನು 4 ವಾರದೊಳಗೆ ಖಾತಾ ಅರ್ಜಿಯಲ್ಲಿ ಆನ್ ಲೈನ್ ನಲ್ಲಿ: ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಖಾತಾ ನಮೂದಿಗೆ ಹೊಸ ಪಾರದರ್ಶಕ ಮತ್ತು ಸಮಾನ ನೀತಿಯನ್ನು ರಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಇದಕ್ಕಾಗಿ ಆನ್ ಲೈನ್  ಮೂಲಕ ಖಾತೆಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಇನ್ನು ನಾಲ್ಕು ವಾರಗಳೊಳಗೆ ಜಾರಿಗೆ ತರಲಾಗುವುದು ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.
ಬೆಂಗಳೂರಿನ ಜ್ಯುಡಿಶಿಯಲ್ ಲೇ ಔಟ್ ನಿವಾಸಿ ಮೂಕಾಂಬಿಕಾ ಭಟ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ವಿನೀತ್ ಕೊತಾರಿ ಅವರ ಮುಂದೆ ಸರ್ಕಾರದ ಪರ ವಕೀಲ ಮಧುಸೂದನ್ ಆರ್ ನಾಯಕ್ ಈ ವಿವರ ಸಲ್ಲಿಸಿದರು. ಖಾತೆಯನ್ನು ವರ್ಗಾಯಿಸುವಲ್ಲಿ ಬಿಬಿಎಂಪಿ ವಿಳಂಬ ಮಾಡಿದೆ ಎಂದು ಆರೋಪಿಸಿ ಮೂಕಾಂಬಿಕಾ ಭಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜ್ಯುಡಿಶಿಯಲ್ ಲೇ ಔಟ್ ನಲ್ಲಿರುವ ಸೈಟೊಂದರ ಖಾತೆಯನ್ನು ಬದಲಾಯಿಸಲು ತಾವು ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ಅಧಿಕಾರಿಗಳು ಹಲವು ಸಮಯಗಳಿಂದ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಮೂಕಾಂಬಿಕಾ ಆರೋಪಿಸಿದ್ದರು.
ಜ್ಯುಡಿಶಿಯಲ್ ಲೇ ಔಟ್ ನಲ್ಲಿರುವ ಸೈಟ್ ಗಳ ಖಾತೆಗಳ ವರ್ಗಾಯಿಸಲು ಮತ್ತು ಕಟ್ಟಡ ನಿರ್ಮಾಣ ಯೋಜನೆಯ ಹೊರೆಯನ್ನು ತಮ್ಮಿಂದ ವರ್ಗಾಯಿಸಲು ಬಿಡಿಎ ಮತ್ತು ಬಿಬಿಎಂಪಿ ಪ್ರಯತ್ನಿಸುತ್ತಿರುವುದನ್ನು ಗಮನಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ಪರವಾಗಿ ಅಥವಾ ಬಿಬಿಎಂಪಿ ಮತ್ತು ಬಿಡಿಎಗಳಿಗೆ ಯಾವುದೇ ತೊಂದರೆಯುಂಟಾಗದಂತೆ ತಪ್ಪಿಸಲು ಸಹಾಯ ಮಾಡುವಂತೆ ಅಡ್ವೊಕೇಟ್ ಜನರಲ್ ಗೆ ನ್ಯಾಯಾಧೀಶರು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.