ಭಾರತದಲ್ಲಿ ಉತ್ತಮ ಓದುಗರನ್ನು ಹೊಂದಿರುವ ನಗರ ಬೆಂಗಳೂರು: ಅಮೆಜಾನ್ ಇಂಡಿಯಾ ಸಮೀಕ್ಷೆ

ಭಾರತದಲ್ಲಿ ಓದುಗರು ಹೆಚ್ಚಿರುವ ನಗರ ಬೆಂಗಳೂರು ಆಗಿದ್ದು, ಮುಂಬೈ ಮತ್ತು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರತದಲ್ಲಿ ಓದುಗರು ಹೆಚ್ಚಿರುವ ನಗರ ಬೆಂಗಳೂರು ಆಗಿದ್ದು, ಮುಂಬೈ ಮತ್ತು ದೆಹಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ ಎಂದು ಅಮೆಜಾನ್ ಇಂಡಿಯಾದ ವಾರ್ಷಿಕ ಓದುಗರ ಟ್ರೆಂಡ್ ವರದಿ-2017 ಹೇಳಿದೆ.
ಈ ವರ್ಷದ ವರದಿ ನೋಡಿ ನಾವು ಬಹಳ ಸಂತಸಗೊಂಡಿದ್ದೇವೆ. ಅಂತ್ಯಂತ ಹೆಚ್ಚು ಓದುಗರಾಗಿರುವ ಲೇಖಕರು ಭಾರತೀಯರಾಗಿದ್ದು ಸತತ 5ನೇ ಸಲ ಭಾರತೀಯರು ಸ್ಥಾನ ಪಡೆದುಕೊಂಡಿರುವುದು ನಮಗೆ ಖುಷಿಯಾಗಿದೆ. ಓದು, ಸಾಹಿತ್ಯಗಳ ಮೇಲೆ ನಮ್ಮ ಗ್ರಾಹಕರಿಗಿರುವ ಆಸಕ್ತಿಗಳನ್ನು ಪೂರೈಸಲು ಹತ್ತಾರು ಭಾಷೆಗಳಲ್ಲಿ, ವಿವಿಧ ಲೇಖಕರ ಪುಸ್ತಕಗಳು ಓದುಗರಿಗೆ ದೊರಕುವಂತೆ ಮಾಡಲು ನಾವು ಸಾಧ್ಯವಾದಷ್ಟು ಸಹಕರಿಸುತ್ತೇವೆ ಎಂದು ಅಮೆಜಾನ್ ಇಂಡಿಯಾದ ವಿಭಾಗೀಯ ವ್ಯವಸ್ಥಾಪಕ ನೂರ್ ಪಟೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷೆ ಪ್ರಕಾರ ಅಮೆಜಾನ್.ಇನ್ ನಲ್ಲಿ ಓದುಗರಲ್ಲಿ ಪರೀಕ್ಷೆ ತಯಾರಿಯ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತೀಯ ಬರಹಗಳು ಎರಡನೇ ಸ್ಥಾನದಲ್ಲಿ, ಸಾಹಿತ್ಯ ಮತ್ತು ಕಾದಂಬರಿ, ವೈಯಕ್ತಿಕ ಬೆಳವಣಿಗೆ ಮತ್ತು ಸ್ವಸಹಾಯ ಮತ್ತು ಪ್ರೀತಿ-ಪ್ರೇಮ, ಪ್ರಣಯಗಳಿಗೆ ಸಂಬಂಧಪಟ್ಟ ಪುಸ್ತಕಗಳು ಅನುಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ. 
ಪುಸ್ತಕಗಳಲ್ಲಿ, ಇಂಡಿಯನ್ ಪಾಲಿಟಿ(5ನೇ ಆವೃತ್ತಿ) ಪುಸ್ತಕ ದೇಶಾದ್ಯಂತ ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಸೀತಾ-ವಾರಿಯರ್ ಆಫ್ ಮಿತಾಲಿ 2017ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾದಂಬರಿಯಾಗಿದೆ. ಇನ್ನೊಂದು ಪರೀಕ್ಷಾ ತಯಾರಿ ಪುಸ್ತಕವಾದ ನಾರ್ಮನ್ ಲೂವಿಸ್ ಅವರ ವರ್ಡ್ ಪವರ್ ಮೇಡ್ ಇಸಿ ಮೂರನೇ ಸ್ಥಾನದಲ್ಲಿ ಮತ್ತು ದ ಪವರ್ ಆಫ್ ಯುವರ್ ಸಬ್ ಕಾನ್ಷಿಯಸ್ ಮೈಂಡ್ ಮತ್ತು ಥಿಂಕ್ ಅಂಡ್ ಗ್ರೊ ರಿಚ್ ಮೂರನೇ ಸ್ಥಾನದಲ್ಲಿವೆ.
ಕಳೆದ ವರ್ಷ ಅಧಿಕ ಮಾರಾಟ ಕಂಡ ಚೇತನ್ ಭಗತ್ ಅವರ ಒನ್ ಇಂಡಿಯನ್ ಗರ್ಲ್ ಈ ವರ್ಷ ಕೂಡ ಅಧಿಕ ಮಾರಾಟ ಕಂಡ ಪುಸ್ತಕಗಳ ಪೈಕಿ ಟಾಪ್ 10ನಲ್ಲಿ 6ನೇ ಸ್ಥಾನದಲ್ಲಿದೆ.
ಅಮೆಜಾನ್ ಇಂಡಿಯಾ ತನ್ನ ವೆಬ್ ಸೈಟ್ ನಲ್ಲಿ ಓದುಗರ ಸಮೀಕ್ಷೆ ನಡೆಸಿದ್ದು, ಅದರಂತೆ 8 ವಿಭಾಗಗಳಲ್ಲಿ ತಮ್ಮ ಇಷ್ಟದ ಪುಸ್ತಕಗಳಿಗೆ ಓದುಗರು ಆನ್ ಲೈನ್ ನಲ್ಲಿ ಮತ ಹಾಕಬೇಕು. ಸವಿ ಶರ್ಮ ಅವರ ದಿಸ್ ಈಸ್ ನಾಟ್ ಯುವರ್ ಸ್ಟೋರಿ  2017ರಲ್ಲಿ ಅತ್ಯಂತ ಜನಪ್ರಿಯ ಪುಸ್ತಕವಾಗಿದೆ. ಅಮಿಶ್ ಅವರ ಸೀತಾ ವಾರಿಯರ್ ಆಫ್ ಮಿತಾಲಿ ಓದುಗರಿಂದ ಅತಿ ಹೆಚ್ಚು ಮತ ಗಳಿಸಿದ ಎರಡನೇ ಪುಸ್ತಕ ಮತ್ತು ಡಾನ್ ಬ್ರೌನ್ ಅವರ ಒರಿಜಿನ್ ಮೂರನೇ ಸ್ಥಾನದಲ್ಲಿದೆ.
ಸಮೀಕ್ಷೆ ಪ್ರಕಾರ, ರಘುರಾಮ್ ರಾಜನ್ ಅವರ ಐ ಡೂ ವಾಟ್ ಐ ಡೂ ವಾಣಿಜ್ಯ ವಿಭಾಗದ ಪುಸ್ತಕಗಳಲ್ಲಿ ಪ್ರಶಸ್ತಿ ಗಳಿಸಿದ್ದು, ಜೆಫ್ ಕಿನ್ನಿಯವರ ಡೈರಿ ಆಫ್ ಎ ವಿಂಪಿ ಕಿಡ್ : ದ ಗೇಟ್ ವೇ ಮಕ್ಕಳ ವಿಭಾಗದ ಪುಸ್ತಕಗಳಲ್ಲಿ ಲಕ್ಷಾಂತರ ಮಂದಿಯ ಮನ ಗೆದ್ದಿದೆ. ಹಿಂದಿ ಪುಸ್ತಕಗಳ ವಿಭಾಗದಲ್ಲಿ ಸುರೇಂದರ್ ಮೋಹನ್ ಪಾಠಕ್ ಅವರ ಹೀರಾ ಫೆರಿ ಸಮೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಕಾಲ್ಪನಿಕೇತರ ಪುಸ್ತಕಗಳ ವಿಭಾಗದಲ್ಲಿ ಶಿವ್ ಅರೂರ್ ಅವರ ಇಂಡಿಯಾಸ್ ಮೊಸ್ಟ್ ಫಿಯರ್ ಲೆಸ್: ಟ್ರು ಸ್ಟೊರಿಸ್ ಆಫ್ ಮಾಡರ್ನ್ ಮಿಲಿಟರಿ ಹೀರೊಸ್ ಓದುಗರ ಮನಗೆದ್ದಿದೆ. ಪ್ರೀತಿ, ಪ್ರೇಮ, ಪ್ರಣಯಗಳಿಗೆ ಸಂಬಂಧಪಟ್ಟ ಪುಸ್ತಕಗಳ ವಿಭಾಗದಲ್ಲಿ ಸುದೀಪ್ ನಗರ್ಕರ್ ಅವರ ಅವರ್ ಸ್ಟೋರಿ ನೀಡ್ಸ್ ನೋ ಫಿಲ್ಟರ್ ಸಮೀಕ್ಷೆಯಲ್ಲಿ ಮುಂಚೂಣಿ ಸ್ಥಾನ ಗಳಿಸಿದೆ. ಲಿಲ್ಲಿ ಸಿಂಗ್ ಅವರ ಹೌ ಟು ಬಿ ಎ ಬವ್ಸ್: ಎ ಗೈಡ್ ಟು ಕಾಂಕ್ವೆರಿಂಗ್ ಲೈಫ್ ಸ್ವಸಹಾಯ ವಿಭಾಗಗಳಲ್ಲಿ ಗೆದ್ದ ಪುಸ್ತಕ ಎಂದು ಘೋಷಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com