ಮನೆಯಿಂದ ನಾಪತ್ತೆಯಾಗಿದ್ದ ಆಡುಗೋಡಿ ಯುವತಿಯನ್ನು ಹುಡುಕಿದ ಪಾಲಕರಿಗೆ ನಾಸಿಕ್ ಯುವತಿ ಜತೆ ಒಂದೇ ಕಡೆ ಇರುವುದು ಗೊತ್ತಾಗಿದೆ. ಮದುವೆಯಾಗಲು ನಿರ್ಧರಿಸಿರುವ ವಿಷಯ ತಿಳಿದು ನಾಸಿಕ್ ಯುವತಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ನೊಂದ ನಾಸಿಕ್ ಯುವತಿ, ಗೆಳತಿಯ ಪಾಲಕರ ವಿರುದ್ಧ ದೂರು ನೀಡಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.