ಕರ್ನಾಟಕ: ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯ, 'ಹೈ' ಮೆಟ್ಟಿಲೇರಲು ಸಿಬಿಎಸ್ಇ ಶಾಲೆಗಳ ನಿರ್ಧಾರ

ಕನ್ನಡ ಭಾಷಾ ಕಲಿಕೆ ನಿಯಮ-2017ರ ಪ್ರಕಾರ ರಾಜ್ಯದ ಸಿಬಿಎಸ್ಇ ಹಾಗೂ ಐಸಿಎಸ್ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕನ್ನಡ ಭಾಷಾ ಕಲಿಕೆ ನಿಯಮ-2017ರ ಪ್ರಕಾರ ರಾಜ್ಯದ ಸಿಬಿಎಸ್ಇ ಹಾಗೂ ಐಸಿಎಸ್ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕುರಿತಂತೆ ಹೈಕೋರ್ಟ್ ಮೆಟ್ಟಿಲೇರಲು ಸಿಬಿಎಸ್ಇ ಶಾಲೆಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ. 
ಸಿಬಿಎಸ್ಇ ಶಾಲೆಗಳಲ್ಲಿ ಕೇಂದ್ರ ಸರ್ಕಾರ ದ್ವಿತೀಯ ಭಾಷೆಯಾಗಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿದ್ದು, ಇದೀಗ ರಾಜ್ಯ ಸರ್ಕಾರ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಹಿನ್ನಲೆಯಲ್ಲಿ ಗೊಂದಲಗಳು ಎದುರಾಗಿದ್ದು, ಈ ಹಿನ್ನಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಸಿಬಿಎಸ್ಇ ಶಾಲೆಗಳು ಮುಂದಾಗಿವೆ. 
ರಾಜ್ಯ ಸರ್ಕಾರ ಆದೇಶಗಳನ್ನು ನಾವು ಒಪ್ಪಿವುದಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ, ರಾಜ್ಯ ಸರ್ಕಾರದ ಆದೇಶವನ್ನು ಇದೀಗ ನಾವು ಒಪ್ಪಿದ್ದೇ ಆದರೆ, ಕೇಂದ್ರ ಸರ್ಕಾರದ ಆದೇಶವನ್ನು ದಿಕ್ಕರಿಸಿದಂತಾಗುತ್ತದೆ ಎಂದು ಸಿಬಿಎಸ್ಇ ಸಂಘದ ಅಧ್ಯಕ್ಷ ಎಂ. ಶ್ರೀನಿವಾಸನ್ ಅವರು ಹೇಳಿದ್ದಾರೆ. 
ರಾಜ್ಯ ಸರ್ಕಾರದ ಆದೇಶ ಕುರಿತಂತೆ ಫೆಬ್ರವರಿ ಮೊದಲ ವಾರದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು. ಗೊಂದಲಗಳಿಗೆ ನ್ಯಾಯಾಲಯವೊಂದೇ ಸ್ಪಷ್ಟ ಆದೇಶ ನೀಡಲು ಸಾಧ್ಯ. ನ್ಯಾಯಾಲಯದ ಮೊರೆ ಹೋಗುವುದು ಬಿಟ್ಟು ಮಧ್ಯಸ್ಥಿಕೆಗಾರರಾಗಿ ನಾವು ಯಾವುದರ ಬಗ್ಗೆಯೂ ಆಲೋಚನೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಆದೇಶ ಕುರಿತಂತೆ ಇತ್ತೀಚೆಗಷ್ಟೇ ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ. 
ಶಾಲೆಯ ಆಡಳಿತ ಮಂಡಳಿಗಳು ಭಾಷೆ ಆಯ್ಕೆ ಮಕ್ಕಳ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಸರ್ಕಾರ ಇದರ ಬಗ್ಗೆ ಏನನ್ನೂ ಹೇಳಬಾರದು. ಸುಪ್ರೀಂಕೋರ್ಟ್ ಕೂಡ ಇದೇ ರೀತಿಯ ಆದೇಶವನ್ನು ನೀಡಿತ್ತು. ಭಾಷೆ ಹಾಗೂ ಮಾಧ್ಯಮಗಳ ಆಯ್ಕೆ ಯಾವಾಗಲೂ ಮಕ್ಕಳ ಹಕ್ಕಾಗಿರುತ್ತದೆ ಎಂದು ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆ ಮಂಡಳಿಯ ಸದಸ್ಯ ಮನ್ಸೂರ್ ಅಲಿ ಖಾನ್ ಅವರು ಹೇಳಿದ್ದಾರೆ. 
ಸರ್ಕಾರದ ಆದೇಶ ಪಾಲನೆ ಮಾಡಲ ಶಾಲೆಗಳಿಗೆ ದಂಡ: ಸಚಿವ
ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸಲಾಗಿದ್ದು, ಸರ್ಕಾರದ ಆದೇಶವನ್ನು ಪಾಲನೆ ಮಾಡದ ಶಾಲೆಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮಂಗಳವಾರ ತಿಳಿಸಿದ್ದಾರೆ. 
ನಿಯಮ ಉಲ್ಲಂಘಿಸುವ ಶಾಲೆಗಳಿಗೆ ರೂ.500 ದಂಡ ಶುಲ್ಕ ನಿಗದಿಪಡಿಸಲಾಗಿದೆ. ದಂಡ ಶುಲ್ಕ ಅತ್ಯಂತ ಕಡಿಮೆ ಎಂದು ನಮಗೆ ಗೊತ್ತಿದೆ. ಆದರೆ, ಶುಲ್ಕ ನಿಗದಿಪಡಿಸಿರುವುದು ನಿಯಂತ್ರಣ ಸಾಧಿಸುವುದಕ್ಕೇ ಹೊರತು ಅವರಿಂದ ಹೆಚ್ಚಿನ ಶುಲ್ಕ ಪಡೆದು ಹಣ ಸಂಗ್ರಹಿಸಲು ಅಲ್ಲ ಎಂದು ಹೇಳಿದ್ದಾರೆ. 
ದ್ವಿತೀಯ ಭಾಷೆಯಾಗಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಕುರಿತಂತೆ ಈಗಾಗಲೇ ಸಿಬಿಎಸ್ಇ ಶಾಲೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇತರೆ ರಾಜ್ಯಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿದೆ. ಎಲ್ಲಾ ಶಾಲೆಗಳು ಕನ್ನಡವನ್ನು ದ್ವಿತೀಯ ಭಾಷೆಯಾಗಿಸಬೇಕೆಂದು ತಿಳಿಸಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com