ಘಟನೆ ಬಳಿಕ ಮಾತನಾಡಿದ ಸಂತ್ರಸ್ಥ ಮಹಿಳೆ, 'ಟೋಲ್ಗೇಟ್ ಸಿಬ್ಬಂದಿ ನನ್ನ ಜೀವ ಉಳಿಸಿದರು. ಅವರು ಇರದಿದ್ದರೆ, ನನ್ನ ಮಾನ ಹಾಗೂ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಒಬ್ಬಂಟಿಯಾಗಿ ಲಗೇಜ್ ಸಮೇತ ಕ್ಯಾಬ್ ಹತ್ತಿದ್ದೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕನ ವರ್ತನೆ ಬದಲಾಯಿತು. ನನ್ನನ್ನು ಕೆಟ್ಟದಾಗಿ ನೋಡಲಾರಂಭಿಸಿದ್ದ. ಆತ, ಬಾಗಿಲುಗಳನ್ನು ಬಂದ್ ಮಾಡಿದ್ದ. ಅವಾಗಲೇ, ನನಗೆ ಭಯ ಶುರುವಾಯಿತು. ನಿಲ್ದಾಣಕ್ಕೆ ಹೋಗಬೇಕಿದ್ದ ಆತ, ಹೈದರಾಬಾದ್ ರಸ್ತೆಯತ್ತ ನನ್ನನ್ನು ಕರೆದೊಯ್ಯುತ್ತಿದ್ದ. ಎಷ್ಟೇ ಕೂಗಾಡಿದರೂ ಕ್ಯಾಬ್ ನಿಲ್ಲಿಸಿರಲಿಲ್ಲ. ಟೋಲ್ಗೇಟ್ ಸಿಬ್ಬಂದಿ ನನ್ನನ್ನು ರಕ್ಷಿಸಿದಾಗಲೇ, ಹೋದ ಜೀವ ಮರಳಿ ಬಂದಂತಾಯಿತು ಎಂದು ಹೇಳಿದ್ದಾರೆ.