ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ಬಿಬಿಎಂಪಿ: ಕೈಯಲ್ಲಿ ಕವರ್ ಹಿಡಿದು ಹೋದರೆ ದಂಡ ಕಟ್ಟಲು ಸಿದ್ಧರಾಗಿ!

ಪ್ಲಾಸ್ಟಿಕ್ ನಿಷೇಧದ ಹೊರತಾಗಿಯೂ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಎಂದಿನಂದೆ ಸಾಗುತ್ತಿರುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಅಧಿಕಾರಿಗಳು, ಇನ್ನು ಮುಂದೆ ಯಾರೇ ಪ್ಲಾಸ್ಟಿಕ್ ಕವರ್ ಹಿಡಿದಿದ್ದರೂ ರೂ.500 ದಂಡ ವಿಧಿಸಲು ಮುಂದಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ಲಾಸ್ಟಿಕ್ ನಿಷೇಧದ ಹೊರತಾಗಿಯೂ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಎಂದಿನಂದೆ ಸಾಗುತ್ತಿರುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಅಧಿಕಾರಿಗಳು, ಇನ್ನು ಮುಂದೆ ಯಾರೇ ಪ್ಲಾಸ್ಟಿಕ್ ಕವರ್ ಹಿಡಿದಿದ್ದರೂ ರೂ.500 ದಂಡ ವಿಧಿಸಲು ಮುಂದಾಗಿದೆ.
ದಂಡ ವಿಧಿಸಲು ಇತೀದ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿರುವ ಬಿಬಿಎಂಪಿ ಹ್ಯಾಂಡ್ ಹೆಲ್ಡ್ ಡಿವೈಸ್ (ಕೈಯಲ್ಲಿ ಹಿಡಿಯುವ ಸಾಧನ) ಮುಖಾಂತರ ಪ್ಲಾಸ್ಟಿಕ್ ಹಿಡಿದಿರುವ ವ್ಯಕ್ತಿಯ ಚಿತ್ರ ಹಾಗೂ ಇನ್ನಿತರೆ ಮಾಹಿತಿಗಳನ್ನು ಸಂಗ್ರಹಿಸಿ ದಂಡವನ್ನು ನೀಡಲು ನಿರ್ಧರಿಸಿದ್ದಾರೆ. ದಂಡದ ಬಳಿಕ ವ್ಯಕ್ತಿಗೆ ಈ ಸಾಧನದ ಮೂಲಕ ರಸೀದಿಯನ್ನು ನೀಡಲಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು, ಪ್ಲಾಸ್ಟಿಕ್ ನಿಷೇಧ ಕುರಿತಂತೆ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ. ಆಂತರಿಕ ಆರೋಗ್ಯ ತನಿಖಾಧಿಕಾರಿಗಳಾಗಾಗಿ ಈಗಾಲೇ ಗುತ್ತಿಗೆ ಆಧಾರದ ಮೇಲೆ 110 ಕಿರಿಯ ಆರೋಗ್ಯ ತನಿಖಾಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. 
ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ ನೀಡಲು ನಿರ್ವಾಹಕರು ಬಳಸುತ್ತಿರುವ ಸಾಧನಗಳಂತೆಯೇ ಈ ಸಾಧನ ಕೂ ಡ ಇರಲಿದೆ. ಆದರೆ, ಈ ಸಾಧನದಲ್ಲಿ ಕ್ಯಾಮೆರಾ, ಜಿಪಿಎಸ್ ಅಳವಡಿಸರಲಾಗಿರುತ್ತದೆ ಎಂದು ಹೇಳಿದ್ದಾರೆ. 
ಬಿಬಿಎಂಪಿ ಅಧಿಕಾರಿಗಳೇ ಈ ಸಾಧನಗಳನ್ನು ಬಳಕೆ ಮಾಡುತ್ತಾರೆ. ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವವರು ಹಾಗೂ ಪ್ಲಾಸ್ಟಿಕ್ ಗಳನ್ನು ಮಾರಾಟ ಮಾಡುತ್ತಿರುವವರ ಫೋಟೋಗಳನ್ನು ತೆಗೆದುಕೊಳ್ಳಲಿದ್ದಾರೆ. ಸಾಧನದಲ್ಲಿರುವ ಜಿಪಿಎಸ್ ವ್ಯವಸ್ಥೆ ಮೂಲಕ ಸ್ಥಳ, ಸಮಯ ಹಾಗೂ ದಿನಾಂಕವನ್ನು ನಮೂದಿಸಿಕೊಂಡು ದಂಡವನ್ನು ವಿಧಿಸಲಾಗುತ್ತದೆ. ದಂಡವನ್ನು ಸ್ವೀಕರಿಸಿದ ಬಳಿಕ ಆಯಾ ವಾರ್ಡ್ ಗಳ ಅಧಿಕಾರಿಗಳು ಹಣವನ್ನು ಘೋಷಣೆ ಮಾಡುತ್ತಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಹಿರಿಯ ಆಧಿಕಾರಿಗಳು ಹಾಗೂ ಕೇಂದ್ರೀಯ ಕಚೇರಿ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com