ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಆನೆಯ ಪ್ರತಾಪ: ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರು

ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ಕಾಡನೆಯೊಂದು ದಾಳಿ ನಡೆಸಿರುವ ಘಟನೆ ಸಿದ್ದಾಪುರ ಸಮೀಪದ ಬಜೆಕೊಲ್ಲಿಯಲ್ಲಿ ಭಾನುವಾರ ನಡೆದಿದೆ...
ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಆನೆಯ ಪ್ರತಾಪ: ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರು
ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಆನೆಯ ಪ್ರತಾಪ: ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರು
ಮಡಿಕೇರಿ: ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ಕಾಡನೆಯೊಂದು ದಾಳಿ ನಡೆಸಿರುವ ಘಟನೆ ಸಿದ್ದಾಪುರ ಸಮೀಪದ ಬಜೆಕೊಲ್ಲಿಯಲ್ಲಿ ಭಾನುವಾರ ನಡೆದಿದೆ. 
ಕಾಡಾನೆ ದಾಳಿಗೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. 
ಮೊಹಮ್ಮದ್ ಎಂಬುವವರು ತಮ್ಮ ಆಟೋದಲ್ಲಿ ಇಬ್ಬರು ಪ್ರಯಾಣಿಕರನ್ನು ಬಜೆಕೊಲ್ಲಿಯಿಂದ ಸಿದ್ದಾಪುರ ಪಟ್ಟಣಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ ಆಲತೋಪು ಎಂಬಲ್ಲಿ ರಸ್ತೆಯ ಮಧ್ಯೆ ಕಾಡಾನೆಯ ಹಿಂಡು ದಿಢೀರ್ ಪ್ರತ್ಯಕ್ಷವಾಗಿದೆ. ಈ ವೇಳೆ ಗಾಬರಿಯಾದ ಚಾಲಕ, ಪ್ರಯಾಣಿಕರನ್ನು ಕರೆದುಕೊಂಡು ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. 
ಈ ವೇಳೆ ರೋಷದಲ್ಲಿದ್ದ ಕಾಡನೆ ಹಿಂಡು ಆಟೋ ಮೇಲೆ ದಾಳಿ ನಡೆಸಿದೆ. ಬಳಿಕ ಸ್ಥಳೀಯ ಎಸ್ಟೇಟ್ ವೊಂದಕ್ಕೆ ಹೋಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. 
ಬಜ್ಜೆಕೊಲ್ಲಿ ಸ್ಥಳೀಯರು ಆರಣ್ಯ ಇಲಾಖೆಯ ಮೇಲೆ ಆರೋಪ ಮಾಡಿದ್ದು, ಸ್ಥಳೀಯ ಎಸ್ಟೇಟ್ ವೊಂದರ ಬಳಿ ಆನೆಗಳು ಬೀಡುಬಿಟ್ಟಿದ್ದವು. ಈ ಆನೆಗಳನ್ನು ಓಡಿಸಲು ಆರಣ್ಯ ಇಲಾಖೆಯ ಸಿಬ್ಬಂದಿ ಯತ್ನ ನಡೆಸುತ್ತಿದ್ದರು. ಈ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿಗಳಿರಲಿಲ್ಲ ಎಂದಿದ್ದಾರೆ. 
ಇನ್ನು ಆಟೋ ಚಾಲಕನಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಿದ್ದಾಪುರದಲ್ಲಿ ಆನೆಗಳ ದಾಳಿ ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದ್ದು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೊರಗೆ ಕಾಲಿಡಲು ಹೆದರುತ್ತಿದ್ದಾರೆಂದು ಆರೋಪಿಸಿದ್ದಾರೆ. 
ಎಸ್ಟೇಟ್ ಕಾರ್ಮಿಕರ ಮೇಲೆ ಆನೆ ದಾಳಿ
ಮಡಿಕೇರಿಯ ಗುಹ್ಯಾ ಗ್ರಾಮದಲ್ಲಿ ಆನೆಯೊಂದು ಇಬ್ಬರು ಕಾರ್ಮಿಕರ ಮೇಲೆ ದಾಳಿ ಮಾಡಿದ್ದು, ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಟಾಟಾ ಕಾಫಿ ಎಸ್ಟೇಟ್ ಕಾರ್ಮಿಕರಾಗಿರುವ ರಾಜಾ ಮತ್ತೊಬ್ಬ ಕಾರ್ಮಿಕನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆನೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com