ಸಾಂದರ್ಭಿಕ ಚಿತ್ರ
ರಾಜ್ಯ
ಅಮಾನ್ಯ ನೋಟು ದರೋಡೆ: ಅಮಾನತುಗೊಂಡಿದ್ದ ಐವರು ಪೊಲೀಸರು ಮತ್ತೆ ಕರ್ತವ್ಯಕ್ಕೆ
ಅಮಾನ್ಯಗೊಂಡಿದ್ದ 35.5 ಲಕ್ಷ ರೂ. ನೋಟು ದರೋಡೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐವರು ಪೊಲೀಸರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಗೃಹ ಇಲಾಖೆಗೆ ಆದೇಶಿಸಿದೆ.
ಬೆಂಗಳೂರು: ಅಮಾನ್ಯಗೊಂಡಿದ್ದ 35.5 ಲಕ್ಷ ರೂ. ನೋಟು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಳಿಸಲಾಗಿದ್ದ ಐವರು ಪೊಲೀಸರನ್ನು ಪುನ: ಸೇವೆಗೆ ಸೇರಿಸಿಕೊಳ್ಳಲು ಗೃಹ ಇಲಾಖೆ ಆದೇಶಿಸಿದೆ.
ಐವರು ಪೊಲೀಸರ ವಿರುದ್ಧ ಇಲಾಖೆ ವಿಚಾರಣೆ ನಡೆಸದೆ ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತು ಮಾಡಿದ್ದ ಕಾರಣದಿಂದಾಗಿ ವಿಚಾರಣಾ ಪ್ರಕ್ರಿಯೆಯಲ್ಲಿ ಲೋಪ ಉಂಟಾಗಿತ್ತು.
ಕಲಾಸಿಪಾಳ್ಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್ ಐ ಎನ್. ಸಿ. ಮಲ್ಲಿಕಾರ್ಜುನ ಮತ್ತು ಕಾನ್ಸ್ ಟೇಬಲ್ ಗಳಾದ ಅನಂತರಾಜ್ ಹೆಚ್. ಎಸ್. ಚಂದ್ರಶೇಖರ್ ಎ. ಪಿ. ಗಿರೀಶ್ ಎಲ್. ಕೆ. ಮಂಜುನಾಥ್ ಹೆಚ್ ಮಾಗಡ ಮೇಲೆ ನವೆಂಬರ್ 2016ರಲ್ಲಿ ಉದ್ಯಮಿಯೊಬ್ಬರಿಂದ ಅಮಾನ್ಯಗೊಂಡ 35.50 ಲಕ್ಷ ದರೋಡೆ ಮಾಡಿದ ಆರೋಪ ಕೇಳಿಬಂದಿತ್ತು.
ಡಿಸೆಂಬರ್ 14, 2016 ರಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಪಿಎಸ್ ಐ ಅಮಾನತುಗೊಳಿಸಿದ್ದರೆ, ನಾಲ್ವರು ಪೊಲೀಸರನ್ನು ಡಿಸಿಪಿ ಅಮಾನತುಗೊಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ