ಗೌರಿ ಲಂಕೇಶ್ ಹತ್ಯೆ: ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಗೌರಿ ಲಂಕೇಶ್
ಗೌರಿ ಲಂಕೇಶ್
Updated on: 
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಪ್ರಮುಖ ಆರೋಪಿಯನ್ನು ಬಂಧಿಸಿದೆ ಎಂದು ಹೇಳಲಾಗುತ್ತಿದೆ. 
ಎಸ್ಐಟಿ ತಂಡ ವಿಜಯಪುರದ ಸಿಂದಗಿ ಮೂಲದ ಪರಶುರಾಮ್ ವಾಗ್ಲೋರೆ ಎಂಬಾತನನ್ನು ನಿನ್ನೆ ಬಂಧಿಸಿದ್ದು ಇಂದು ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿ 14 ದಿನಗಳ ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ ಬಿಕೆ ಸಿಂಗ್ ತಿಳಿಸಿದ್ದಾರೆ. 
ಎಸಿಎಂಎಂ ಕೋರ್ಟ್ ಗೆ ಎಸ್ಐಟಿ ತಂಡ 2017ರ ಸೆಪ್ಟೆಂಬರ್ 5ರಂದು ಪರಶುರಾಮನ್ ಗೌರಿ ಅವರಿಗೆ ಗುಂಡು ಹಾರಿಸಿದ್ದು ಎಂದು ಹೇಳಿದ್ದು ಇನ್ನು ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ಇನ್ನೂ ನಾಪತ್ತೆಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. 
ಹತ್ಯೆ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ ಆರನೇ ಆರೋಪಿಯಾಗಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಎಸ್ಐಟಿ ತಂಡ ಮದ್ದೂರಿನ ಕೆಟಿ ನವೀನ್ ಕುಮಾರ್, ಶಿಕಾರಿಪುರದ ಸುಜೀತ್ ಕುಮಾರ್, ಅಮೋಲ್ ಕಲೆ, ಮನೋಹರ್ ಎಡ್ವೆ, ಪ್ರವೀಣ್, ಅಮಿತ್ ದೆಗ್ವೇರ್ ಹಾಗೂ ಹೊಟ್ಟೆ ಮಂಜನನ್ನು ಬಂಧಿಸಿದ್ದಾರೆ. 
ಪರಶುರಾಮ್ ಹಿಂದು ಸಂಘಟನೆ ಕಾರ್ಯಕರ್ತನಾಗಿದ್ದ ಎನ್ನಲಾಗಿದ್ದು 2012ರಲ್ಲಿ ಸಿಂದಗಿ ತಹಶೀಲ್ದಾರ್ ಕಚೇರಿ ಮುಂದೆ ಪಾಕಿಸ್ತಾನ ಧ್ವಜ ಹಾರಿಸಿ ಬಸ್ ಗೆ ಕಲ್ಲು ತೂರಿದ ಆರೋಪಿಗಳ ಪೈಕಿ ಪರಶುರಾಮ ಕೂಡ ಒಬ್ಬನಾಗಿದ್ದ. 
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಪ್ರಮುಖ ಆರೋಪಿಯನ್ನು ಬಂಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com