127 ಕೋಟಿ ರೂ ಮೊತ್ತದ ಐಟಿ ಹಿಂಬಾಕಿಯಿಂದ ವಿನಾಯಿತಿ ಪಡೆದ ವಿಟಿಯು

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಹುದೊಡ್ಡ ಜೀವದಾನ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ವಿಶ್ವವಿದ್ಯಾಲಯ ಪಾವತಿಸಬೇಕಾಗಿದ್ದ 127 ಕೋಟಿ ರೂ. ಮೊತ್ತದ ಹಿಂಬಾಕಿ ಹಾಗೂ ಬಡ್ಡಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಿದೆ.
ವಿಶ್ವವಿದ್ಯಾಲಯ ಚಿತ್ರ
ವಿಶ್ವವಿದ್ಯಾಲಯ ಚಿತ್ರ
Updated on
ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಹುದೊಡ್ಡ ಜೀವದಾನ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ವಿಶ್ವವಿದ್ಯಾಲಯ ಪಾವತಿಸಬೇಕಾಗಿದ್ದ 127 ಕೋಟಿ ರೂ. ಮೊತ್ತದ ಹಿಂಬಾಕಿ ಹಾಗೂ ಬಡ್ಡಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಿದೆ.
127 ಕೋಟಿ ಮೊತ್ತದ  ಆದಾಯ ತೆರಿಗೆ ಹಿಂಬಾಕಿ ತೆರಿಗೆ ಹಾಗೂ ಬಡ್ಡಿಯನ್ನು ಪಾವತಿಸುವಂತೆ ಈ ಹಿಂದೆ ಆದಾಯ ತೆರಿಗೆ ಇಲಾಖೆಗೆ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿತ್ತು.
ಐಟಿ ಇಲಾಖೆ ಪರವಾಗಿ ಸುಪ್ರೀಂಕೋರ್ಟ್ ಕೂಡಾ ಆದೇಶ ಹೊರಡಿಸಿತ್ತು. ಈಗ ವಿಚಾರಣೆ ಮುಗಿದಿದ್ದು, ವಿವಿ ಪರವಾಗಿ ನ್ಯಾಯಾಲಯ ಆದೇಶ ನೀಡಿದೆ.  ಈ ಆದೇಶವನ್ನು ಪೂರ್ತಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂಬಂತಹ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಿರುವ ಮಾಹಿತಿ ಪ್ರಕಾರ ಆದಾಯ ತೆರಿಗೆ ಕಾಯ್ದೆ  ( ಎ) ಸೆಕ್ಷನ್ 12 ರ ಅಡಿಯಲ್ಲಿ ವಿವಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದುಕೊಂಡಿದೆ. ಆದಾಯ ತೆರಿಗೆ ಕಾಯ್ದೆ 1961ರ  ಸೆಕ್ಷನ್ 12-ಎಎ ಅಡಿಯಲ್ಲಿ  ಶಿಕ್ಷಣ ಸಂಸ್ಥೆಗಳು ಚಾರಿಟಬಲ್ ಟ್ರಸ್  ಅಥವಾ  ಸಂಸ್ಥೆಯಾಗಿ   ಸ್ಥಾಪನೆಗೊಂಡಿದ್ದರೆ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಲಿವೆ.
ಇಲಾಖೆಯು ವಿಶ್ವವಿದ್ಯಾನಿಲಯದ ಹಿಂದಿನ ಖಾತೆಗಳನ್ನು ವಶಪಡಿಸಿಕೊಂಡಾಗ, ಕಾರ್ಪಸ್ ನಿಧಿಯ ಮೇಲೆ  ವಿಟಿಯು  ಬಡ್ಡಿಯನ್ನು ಪಡೆಯುತ್ತಿರುವ ಮೊತ್ತವು ತೆರಿಗೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ .
ಎಲ್ಲಾ ವರ್ಷಗಳಲ್ಲೂ ವಿನಾಯಿತಿ ನೀಡಿರಲಿಲ್ಲ.
ವಿಟಿಯು ಸಂಕಷ್ಟದಲ್ಲಿದ್ದು, ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ  ಹೋರಾಟ ಮಾಡಬೇಕಾಗಿದೆ. ರಾಜ್ಯಸರ್ಕಾರದಿಂದಲೂ ಯಾವುದೇ ಆರ್ಥಿಕ ನೆರವು ದೊರಕಿಲ್ಲ. ಆದಾಗ್ಯೂ, ವಿವಿ ಸಿಬ್ಬಂದಿಗಳು ಇದ್ದರಲ್ಲಿಯೇ ಉಸಿರಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com